ರಸ್ತೆ ಕಾಮಗಾರಿಗೆ ಶಾಸಕ ರಾಜಣ್ಣ ಶಂಕುಸ್ಥಾಪನೆ
ಕ.ಪ್ರ.ವಾರ್ತೆ ಶಿಡ್ಲಘಟ್ಟ ಸೆ. 4
ವರದನಾಯಕನಹಳ್ಳಿ ರಸ್ತೆ ಕಾಮಗಾರಿಗೆ ಶಾಸಕ ರಾಜಣ್ಣ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿ, ವರದನಾಯನಹಳ್ಳಿಯನ್ನು ಸುವರ್ಣ ಗ್ರಾಮ ಯೋಜನೆಯಲ್ಲಿ ಸೇರಿಸಲಾಗಿದೆಯೆಂದು ತಿಳಿಸಿದರು.
ಹಳ್ಳಿಯಲ್ಲಿ ನೀರಿನ ಕೊರತೆ ಇದ್ದು, ನೀರಿನ ಟ್ಯಾಂಕ್ ಕಟ್ಟಿಸಲಾಗುತ್ತಿದೆ. ಆದಷ್ಟು ಬೇಗ ಪೂರ್ಣ ಮಾಡುವುದಾಗಿ, ಹಳ್ಳಿಗೆ ಬಸ್ ಸೌಕರ್ಯ ಕಲ್ಪಿಸುವುದಾಗಿ ಹೇಳಿದರು.
ರಸ್ತೆ ಕಾಮಗಾರಿಯು ಸುಮಾರು 2 ಕಿ.ಮೀ. ಇದ್ದು, ಕಾಂಕ್ರೀಟ್ ರಸ್ತೆಗೆ 10 ಲಕ್ಷ ಮಂಜೂರಾಗಿದೆಯೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಧನುಂಜನರೆಡ್ಡಿ, ಉಮೇಶ್, ಡಿ.ಬಿ. ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.