ಸರಗಳ್ಳತನ ಪ್ರಕರಣ; ಒಬ್ಬ ಪೊಲೀಸ್ ವಶಕ್ಕೆ
ಚಿಂತಾಮಣಿ: ಪೊಲೀಸರ ಸೋಗಿನಲ್ಲಿ ಬಂದು ವೃದ್ಧೆಯ ಲಕ್ಷಾಂತರ ರುಪಾಯಿ ಬೆಲೆಬಾಳುವ ಬಂಗಾರದ ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ: ಪಟ್ಟಣದ ವೆಂಕಟಗಿರಿಕೋಟೆ ಮೊದಲನೇ ಕ್ರಾಸ್ ಬಳಿ ಇರುವ ವೃದ್ಧೆ ನೀಲಮ್ಮ ಎಂಬಾಕೆ ಮೊಮ್ಮಗನ ಜೊತೆ ಕಳೆದ ಜು.25ರಂದು ಪಟ್ಟಣದ ಬಳಿ ಬಸ್‌ಗಾಗಿ ಕಾಯುತ್ತಿರುವಾಗ ಇಬ್ಬರು ಅಪರಿಚಿತರು ಕಪ್ಪು ಬಣ್ಣದ ದ್ವಿಚಕ್ರದಲ್ಲಿ ಬಂದು ಅಜ್ಜಿ ನಾವು ಪೊಲೀಸರು, ಮೊನ್ನೆ ಇಲ್ಲಿ ಕಳ್ಳತನವಾಗಿದೆ, ಈ ಕಡೆ ಕಳ್ಳರು ಹೆಚ್ಚಾಗಿದ್ದಾರೆ. ನಿಮ್ಮ ಕತ್ತಿನ ಸರ ಭದ್ರವಾಗಿ ಇಟ್ಟುಕೊಳ್ಳಿ ಎಂದು ನಂಬಿಸಿ ಕಳ್ಳತನ ಮಾಡಿದ್ದರು. ಮೊಮ್ಮಗ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಚೊಕ್ಕರೆಡ್ಡಿಹಳ್ಳಿ ಗ್ರಾಮದ ವ್ಯಕ್ತಿನನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ.