ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಅಕ್ಕಚಮ್ಮ ಕಲ್ಯಾಣ ಮಂಟಪಕ್ಕೆ ಸ್ವಾಮೀಜಿಗಳಿಂದ ಬೀಗ: ಸಮಾಜ ತಲೆ ತಗ್ಗಿಸುವಂತದ್ದು'

Rashmi Kasaragodu
Updated On : 6 Sept 2013, 12:03 pm

ಬಂಗಾರಪೇಟೆ: ಹಣದ ವ್ಯವಹಾರಕ್ಕೆ ಹಾಗೂ ಟ್ರಸ್ಟ್‌ಅನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ಬುಧವಾರ ವೀರಶೈವ ಸಮಾಜದ ಗುಂಪೊಂದು ಅಕ್ಕಚಮ್ಮ ನಂಜುಂಡಯ್ಯ ಕಲ್ಯಾಣ ಮಂಟಪಕ್ಕೆ ಸಮಾಜದ ಸ್ವಾಮೀಜಿಗಳ ಸಮ್ಮುಖದಲ್ಲಿ ಬೀಗ ಹಾಕಿರುವ ಪ್ರಕರಣ ಸಮಾಜ ತಲೆ ತಗ್ಗಿಸುವಂತಾಗಿದೆ. ಸ್ವಾಮೀಜಿಗಳು ಇಂತಹ ಕೃತ್ಯಕ್ಕೆ ಇಳಿಯಬಾರದಿತ್ತು ಎಂದು ಕೋಲಾರ ಜಿಲ್ಲಾ ವೀರಶೈವ ಮಹಾಸಭಾಧ್ಯಕ್ಷ ಎ.ಎನ್. ಸದಾಶಿವಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಖಾಸಗಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಅಕ್ಕಚಮ್ಮ ಕಲ್ಯಾಣ ಮಂಟಪದ ಆಡಳಿತ ಮಂಡಳಿಯನ್ನು ಸಮುದಾಯದ ಆಸ್ತಿಯೆಂದು ಬಿಂಬಿಸಿ ಜನರಲ್ಲಿ ಸತ್ತು ಭಾವಣೆ ಮೂಡುವಂತೆ ಮಾಡಿದ್ದಾರೆ. ಪಟ್ಟಣದಲ್ಲಿ ವೀರಶೈವರು ಮೊದಲಿನಿಂದಲೂ ಒಗ್ಗಟ್ಟಿನಿಂದ ಇದ್ದಾರೆ. ಈ ಒಗ್ಗಟ್ಟನ್ನು ಮುರಿಯಲು ಗುಂಪೊಂದು ಸ್ವಾಮೀಜಿಗಳನ್ನು ಬಳಸಿಕೊಂಡಿದ್ದಾರೆ ಅಲ್ಲದೆ ಖಾಸಗಿ ಟ್ರಸ್ಟ್ ಅನ್ನು ವಶಕ್ಕೆ ವಾಮ ಮಾರ್ಗದಲ್ಲಿ ಹಿಡಿಯಲು ಈ ರೀತಿ ಹಣದ ಅವ್ಯವಹಾರ ನಡೆದಿದೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ವಾಸ್ತವಾಂಶದ ಪ್ರಕಾರ ಯಾವುದೇ ಅವ್ಯವಹಾರ ನಡೆದಿಲ್ಲ ಮತ್ತು ಟ್ರಸ್ಟ್‌ಗೂ ವೀರಶೈವ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಸತ್ಯಾಸತ್ಯತೆಯನ್ನು ಸಮಾಜದ ಸ್ವಾಮಿಜಿಗಳಿಗೂ ತಿಳಿದಿದ್ದರೂ ಹಣ ಸಂಪಾದಿಸುವ ಏಕೈಕ ಉದ್ದೇಶದಿಂದ ಕೆಲವರೊಂದಿಗೆ ಶಾಮೀಲಾಗಿ ಕಲ್ಯಾಣ ಮಂಟಪಕ್ಕೆ ಅನಧಿಕೃತವಾಗಿ ಬೀಗ ಹಾಕಿದ್ದಾರೆ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾದ ಸ್ವಾಮೀಜಿಗಳೇ ಇಂತಹ ತಪ್ಪು ಕೆಲಸಗಳನ್ನು ಮಾಡಿದರೆ ಇನ್ನು ಸ್ವಾಮೀಜಿಗಳ ಬಗ್ಗೆ ಇರುವ ನಂಬಿಕೆ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸದರಿ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಹತ್ತಾರು ಉತ್ತಮ ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಇದನ್ನು ಸಹಿಸಲಾಗದೆ ಈ ರೀತಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಬಿ.ಜಿ. ನಂಜಪ್ಪ, ಕೆ.ಜಿ.ನಂಜಪ್ಪ, ಸದಾನಂದ, ಸಿದ್ದಮಲ್ಲೇಶ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement