ಆರೋಪಿ ಬಂಧನಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ
ಮಾಲೂರು: ಹೆಂಡತಿ ಹಾಗೂ ಹೆಣ್ಣು ಮಗುವನ್ನು ಕೊಂದ ಆರೋಪಿ ಗ್ರಂಥಾಲಯ ಪಾಲಕ ಸಂತೋಷಕುಮಾರ್ ನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಸಿಪಿಐಎಂ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿರುವ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರದಂದು ನಡೆದಿದೆ.
ಕಳೆದ ತಿಂಗಳು 10ರಂದು ಕೋಲಾರದ ತನ್ನ ಮನೆಯಲ್ಲಿ ತನ್ನ ಹೆಂಡತಿ ದೀಪ್ತಿಳನ್ನು ತನ್ನ ಎರಡನೇ ಮದುವೆಗೆ ಒಪ್ಪಿಗೆ ನೀಡುವಂತೆ ಒತ್ತಾಯಿಸಿ-ಹಿಂಸಿಸಿ ಹೆಣ್ಣು ಮಗು ವೀಣಾಳನ್ನು ಸೇರಿಂದಂತೆ ಇಬ್ಬರನ್ನು ಕೊಲೆಗೈದ ಪರಾರಿಯಾಗಿರುವ ಸೊಲಿಬೆಲೆ ಸಾರ್ವಜನಿಕ ಗ್ರಂಥಾಲಯ ಪಾಲಕ ನಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋಪಿ ಸಂತೋಷಕುಮಾರ್ ನನ್ನು ಬಂಧಿಸುವಂತೆ ಕಳೆದ 15 ದಿನದಿಂದ ಜಿಲ್ಲಾ ಕೇಂದ್ರದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅನಿರ್ಧಿಷ್ಟಾವಾಧಿಯ ಧರಣಿ ನಡೆಸುತ್ತಿದ್ದರೂ, ಆರೋಪಿಯನ್ನು ಬಂಧಿಸದಿರುವುದು ನಾಚಿಗೇಡುತನದ ಪರಮಾವಧಿ ಎಂ್ಟಞ್ಜ.
ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಸಂಪಂಗಿ ಅವರು ಕೊಲೆ ಪ್ರಕರಣ ನಡೆದು 58 ದಿನಗಳಾಗಿದ್ದರೂ ಪೊಲೀಸ್ ಇಲಾಖೆ ತೋರಿಸುತ್ತಿರುವ ನಿರ್ಲಕ್ಷವು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು. ಈ ಕೂಡಲೇ ಆರೋಪಿ ಸಂತೋಷಕುಮಾರ್ನನ್ನು ಬಂಧಿಸುವ ಜತೆಯಲ್ಲಿ ಪ್ರಕರಣವನ್ನು ಸಿಒಡಿಗೆ ಒಪ್ಪಿಸಬೇಕೆಂದು ಆಗ್ರಹಿಸಿದರು. ಸಂಘಟನೆಯ ಲೋಕೇಶ್ವರಿ, ಪುಪ್ಬಾವತಮ್ಮ, ಚೌಡಮ್ಮ, ಗೋಪಿ, ಅರುಣ್ ಕುಮಾರ್, ಶಂಕರ್, ಲಕ್ಷ್ಮಮ್ಮ, ಶ್ರೀನಿವಾಸ್, ಗೌರಮ್ಮ, ಜಯಮ್ಮ, ಶ್ರೀನಿವಾಸ್ ಗೌಡ ಇದ್ದರು.