ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರ ಪತ್ರಿಕಾ ವಿತರಕರ ದಿನಾಚರಣೆ

Rashmi Kasaragodu
Updated On : 6 Sept 2013, 12:07 pm

ಕೋಲಾರ: ಪತ್ರಿಕಾ ವಿತರಣೆ ದಿನಾಚರಣೆ ಅಂಗವಾಗಿ ಕೋಲಾರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ಹಿರಿಯ ಪತ್ರಿಕಾ ವಿತರಕರಾಗಿದ್ದ ಬಿ.ಎ. ಗೋಪಾಲಗುಪ್ತ ರವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತಾಡಿದಂತಹ ಹಿರಿಯ ಪತ್ರಿಕಾ ವಿತರಕರಾದ ಬಿ.ವಿ. ಗೋಪಾಲಗುಪ್ತ ರವರು  ಪತ್ರಿಕಾ ವಿತರಕರು ಯಾವುದೇ ಜಗಳ ಮಾಡಿಕೊಳ್ಳದೆ ಹೊಂದಾಣಿಕೆಯಿಂದ ವ್ಯಾಪಾರ ನಡೆಸಿಕೊಂಡು ಹೋಗುವಂತೆ ಎಲ್ಲಾ ಏಜೆಂಟರಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅವರು ಪತ್ರಿಕಾ ವಿತರಕರಿಗೆ ಜಿಲ್ಲಾ ಪತ್ರಕರ್ತರ ಸಂಘದ ಸಹಕಾರ ಎಂಬುದು ಸದಾ ಇರುತ್ತದೆ ಅದನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಎಸ್. ಗಣೇಶ್ ಅವರು ಪತ್ರಿಕೆ ವಿತರಕರು ತುಂಬಾ ಶ್ರಮ ಪಡುತ್ತಾರೆ. ಮಳೆ ಗಾಳಿ ಚಳಿ ಎನ್ನದೆ ಪತ್ರಿಕೆ ಹಂಚುತ್ತಾರೆಂದು ಎಂದು ನುಡಿದರು.
ಹಿರಿಯ ಪತ್ರಕರ್ತ ವಾಸುದೇವಹೊಳ್ಳರವರು ಮಾತನಾಡಿ ಇದೇ ಮೊದಲ ಬಾರಿಗೆ ಪತ್ರಿಕಾ ದಿನಾಚರಣೆ ಆರಂಭಿಸಿದ್ದಾರೆ ಪ್ರತಿವರ್ಷ ಹೀಗೆ ಇದೇ ರೀತಿ ಆಚರಣೆ ಮಾಡಿಕೊಂಡು ಹೋಗಲು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಿ. ರಮೇಶ್, ಉಪಾಧ್ಯಕ್ಷರಾದ ಸಿ. ರಮೇಶ್, ಕಾರ್ಯದರ್ಶಿ ಎನ್. ಮಂಜುನಾಥ್, ಖಜಾಂಚಿ ವಿಜಯ್‌ಕುಮಾರ್, ಮಾಜಿ ಅಧ್ಯಕ್ಷಶ್ರೀನಿವಾಸಶೆಟ್ಟಿ, ಶ್ರೀನಿವಾಸಮೂರ್ತಿ, ಕಾರಂತ್, ಸಾಗರ್, ಹರೀಶ್, ಎಸ್.ಕೆ. ಮಂಜುನಾಥ್, ಎಂ. ಮಂಜುನಾಥ್, ಮಹದೇವಪ್ಪ, ಮುನಿರಾಜು, ಅನೀಲ್, ರಾಜಣ್ಣ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement