ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾಳೆ ಸೀಳು ತುಟಿ ಚಿಕಿತ್ಸಾ ಶಿಬಿರ

Rashmi Kasaragodu
Updated On : 6 Sept 2013, 12:04 pm

ಬಂಗಾರಪೇಟೆ: ಟ್ರಿನಿಟಿ ಕೇರ್ ಫೌಂಡೇಷನ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಆಶ್ರಯದಲ್ಲಿ ಸೆ.7ರಂದು ಬೆಳಗ್ಗೆ 10ರಿಂದ 2ರತನಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಸೀಳು ತುಟಿ ಮತ್ತು ಮುಖದ ವಿಕಲಾಂಗತೆಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಡಾ. ಥಾಮಸ್ ತಿಳಿಸಿದ್ದಾರೆ. ಶಿಬಿರದಲ್ಲಿ ಸೀಳು ತುಟಿ ಮತ್ತು ಸೀಳು ಅಂಗಳದ ಶಸ್ತ್ರ ಚಿಕಿತ್ಸೆ, ಹಿಂದಿನ ಸೀಳು ತುಟಿ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಉಳಿದ ತುಟಿಯ ಕಲೆಯನ್ನು ಸರಿಪಡಿಸುವ ಶಸ್ತ್ರ ಚಿಕಿತ್ಸೆ, ಹಿಂದಿನ ಸೀಳು ಅಂಗಳದ ಶಸ್ತ್ರ ಚಿಕಿತ್ಸೆ ಪರಿಣಾಮವಾಗಿ ಉಳಿದ ಅಂಗಳದಲ್ಲಿ ರಂಧ್ರವನ್ನು ಮುಚ್ಚುವ ಶಸ್ತ್ರ ಚಿಕಿತ್ಸೆ, ಮೂಗಿನ ವಿಕಲಾಂಗತೆಯನ್ನು ಸರಿಪಡಿಸುವ ಶಸ್ತ್ರ ಚಿಕಿತ್ಸೆ, ಹುಟ್ಟಿನಿಂದಲೇ ಕಂಡುಬರುವ ಮುಖದ ವಿಕಲಾಂಗತೆ ಇದ್ದರೆ ಅದನ್ನು ಸರಳ ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಲಾಗುವುದು ವಿವರಗಳಿಗೆ ಡಾ. ಕಮಲಾಕರ್ ಪ್ರಭಾರ ಆರೋಗ್ಯಾಧಿಕಾರಿಗಳು, ಡಾ. ಥಾಮಸ್, ಮತ್ತು ಸಿರಾಜ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಕೆರೆಯಲ್ಲಿ ಬಿದ್ದು ವ್ಯಕ್ತಿ ಆತ್ಮಹತ್ಯೆ
ಗುಡಿಬಂಡೆ: ತಾಲೂಕಿನ ದಪ್ಪರ್ತಿ ಗ್ರಾಮದ ಬೈರಪ್ಪ(60) ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಗುಡಿಬಂಡೆ ಅಮಾನಿ ಬೈರಸಾಗರ ಕೆರೆಯಲ್ಲಿ ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಆರಕ್ಷಕ ವೃತ್ತ ನಿರೀಕ್ಷಕ ಶಿವಕುಮಾರ್, ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಪೊಲೀಸ್ ಪೇದೆಗಳು ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement