ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಳಬಾಗಿಲು ತಾಪಂ 'ಕೈ' ವಶ

Rashmi Kasaragodu
Updated On : 6 Sept 2013, 12:03 pm

ಮುಳಬಾಗಿಲು: ಅವಿಶ್ವಾಸ ನಿರ್ಣಯದಿಂದ ತೆರವಾದ ತಾಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಬ್ಬಮ್ಮ ಮತ್ತು ಉಪಾಧ್ಯಕ್ಷರಾಗಿ ಕೆ.ಎಂ. ರಾಜಪ್ಪ ಅವರು 1 ಮತ ಅಂತರದಿಂದ ಕೈ ಎತ್ತುವ ಮೂಲಕ ಜಯಶೀಲರಾಗಿದ್ದಾರೆ.
ತಾ.ಪಂ.ಯಲ್ಲಿ ಒಟ್ಟು 19 ಸದಸ್ಯರು ಇದ್ದು, ಈ ಹಿಂದೆ ಜೆಡಿಎಸ್‌ನ ಚಿನ್ನಕ್ಕ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ರಾಜೇಗೌಡರು ಆಯ್ಕೆಗೊಂಡಿದ್ದರು. ಇವರಿಬ್ಬರ ವಿರುದ್ಧ ಕೆಲವು ದಿನಗಳ ಹಿಂದೆ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಮಂಡಿಸಿದ್ದರಿಂದ ಇಬ್ಬರು ಅಧಿಕಾರ ಕಳೆದುಕೊಂಡಿದ್ದರಿಂದ ಬುಧವಾರ ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ ಜೆಡಿಎಸ್‌ನ ಚಿನ್ನಕ್ಕ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್. ಶ್ರೀನಿವಾಸ ನಾಮಪತ್ರ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಕೊತ್ತೂರು ಬಣದ ಸುಬ್ಬಮ್ಮ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಂ. ರಾಜಪ್ಪ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಸಲಾಯಿತು.
ಮತದಾನ ಸದಸ್ಯರು ಕೈ ಎತ್ತುವ ಮೂಲಕ ನಡೆಯಿತು. ಸುಬ್ಬಮ್ಮನ ಪರ 10 ಮತಗಳು ಚಿನ್ನಕ್ಕ ಪರ 9 ಮತಗಳು ಬಂದಿದ್ದು ನಂತರ ಉಪಾಧ್ಯಕ್ಷರ ಸ್ಥಾನಕ್ಕೆ ರಾಜಪ್ಪನವರ ಪರ 10 ಮತಗಳು ಬಂದರೆ ಕೆ.ಎಂ. ಶ್ರೀನಿವಾಸ್ ಪರ 9 ಮತಗಳು ಪಡೆದರು. ನಂತರ ಚುನಾವಣಾಧಿಕಾರಿಗಳಾದ ಉಪ ವಿಭಾಗಾಧಿಕಾರಿ ಸಿ.ಎಂ. ಮಂಜುನಾಥ್ ಫಲಿತಾಂಶ ಘೋಷಣೆ ಮಾಡಿದರು.
ತಹಸೀಲ್ದಾರ್ ರಾಮಮೂರ್ತಿ, ಡಾ. ರಮಾನಂದ್ ಹಾಜರಿದ್ದರು. ಶಾಸಕ ಕೊತ್ತೂರು ಮಂಜುನಾಥ್ ಬಣದ ಕಾರ್ಯಕರ್ತರಾದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ, ಪುರಸಭೆ ಮಾಜಿ ಸದಸ್ಯ ಕಲ್ಲುಪಲ್ಲಿ ಪ್ರಕಾಶ್, ಹೆಬ್ಬಣಿ ಪ್ರಕಾಶ್ ರಾಮು, ಶ್ರೀನಿವಾಸ್ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement