ರಾಯಲ್ ಶಾಲೆಯಲ್ಲಿ ಶಿಕ್ಷಕರ ದಿನ
ಚಿಂತಾಮಣಿ: ರಾಯಲ್ ಶಾಲೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬ ಹಾಗೂ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಯು.ಕೆ.ಜಿ ಪುಟಾಣಿಗಳು ರಾಧಾಕೃಷ್ಣನ್ ಅವರ ಛದ್ಮವೇಷ ಧರಿಸಿ ತಮ್ಮ ಬಾಲ ನುಡಿಗಳಲ್ಲಿ ಅವರ ಬದುಕಿನ ಚಿತ್ರಣವನ್ನು ನೆರೆದಿದ್ದ ವಿದ್ಯಾರ್ಥಿಗಳು, ಪೋಷಕ ವೃಂದ ಹಾಗೂ ಶಿಕ್ಷಕರ ಮುಂದೆ ಪ್ರಸ್ತುತಪಡಿಸಿದರು.