ಅಂಬೇಡ್ಕರ್ ಆದರ್ಶ ಪಾಲಿಸಲು ಕರೆ
ಕೋಲಾರ: ತಾಲೂಕಿನ ರಾಜಕಲ್ಲಹಳ್ಳಿ ಗ್ರಾಮದಲ್ಲಿ 40 ಲಕ್ಷ ರು. ವೆಚ್ಚದ ಸುವರ್ಣ ಗ್ರಾಮ ಯೋಜನೆಗೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ವರ್ತೂರು ಪ್ರಕಾಶ್ ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಅಹಿಂದ ವರ್ಗಗಳ ಆಶಾಕಿರಣವಾದ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಹಕ್ಕುಗಳನ್ನು ಪಡೆಯುವಂತೆ ಹೇಳಿದರು.ಗ್ರಾಮದಲ್ಲಿ ಚುನಾವಣೆಗೂ ಮುನ್ನಾ ನೀಡಿದ ಭರವಸೆಯಂತೆ ಸುವರ್ಣ ಗ್ರಾಮ ಯೋಜನೆಯನ್ನು ಮಂಜೂರು ಮಾಡಿದ್ದು, ಗ್ರಾಮಕ್ಕೆ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಮಾಡಿಸಿಕೊಳ್ಳುವಂತೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ವೀರಯ್ಯ ಮಾತನಾಡಿ, ಹಿಂದುಳಿದ ವರ್ಗಗಳ ಏಳಿಗೆಯ ದೃಷ್ಟಿಯಿಂದ ಅಂಬೇಡ್ಕರ್ ಅವರು ಹಾಕಿಕೊಟ್ಟ ಬುನಾದಿಗೆ ಎಲ್ಲರೂ ಋಣಿಗಳಾಗಿರಬೇಕು ಎಂದರು. ಮುಖಂಡರಾದ ಬೆಗ್ಲಿ ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಮುನಿನಾರಾಯಣಪ್ಪ, ವಿಜಯಲಕ್ಷ್ಮೀ, ಗ್ರಾಪಂ ಸದಸ್ಯರುಗಳಾದ ನಾರಾಯಣಸ್ವಾಮಿ, ಲಕ್ಷ್ಮಯ್ಯ, ಎ. ಕ್ಷ್ಮಯ್ಯ, ಮುನಿಯಪ್ಪ, ಕೃಷ್ಣಪ್ಪ. ಉದ್ದಂಡಪ್ಪ, ಮುತ್ತಪ್ಪ, ರಾಮಪ್ಪ, ಕುಪ್ಪಣ್ಣ ಮತ್ತಿತರರು ಇದ್ದರು.