ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಿ: ಮುನಿಯಪ್ಪ
ಶಿಡ್ಲಘಟ್ಟ: ನಂದಿನಿ ಹಾಲು ಉತ್ಪಾದಕರ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸೆ ಬೆಂಬಲಿತ 13 ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಮಾಜಿ ಸಚಿವ ವಿ. ಮುನಿಯಪ್ಪ ಕರೆ ನೀಡಿದರು.
ತಾಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಹಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೊತೆಯಲಿದ್ದ ಹಿತಶತ್ರುಗಳು ನನ್ನು ಮೋಸ ಮಾಡಿದ್ದಾರೆ. ಕ್ಷೇತ್ರದ ಜನರು ಕೈಹಿಡಿದಿದ್ದು ನಂದಿನಿ ಸಹಕಾರ ಚುನಾವಣೆಯಲ್ಲಿ ಮತದಾನ ಮಾಡಲು ಉದಾಸೀನ ತೋರಿಸದೇ ಪಕ್ಷದ 13 ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು.
ಕೇಂದ್ರದ ಯು.ಪಿ.ಎ ಹಾಗೂ ರಾಜ್ಯ ಸರಕಾರ ಹಾಲು ಉತ್ಪಾದಕರ ಸಹಕಾರ ನೀಡಲು ಅನೇಕ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದ ಅವರು ಹಾಲು ಉತ್ಪಾದಕರಿಗೆ 4 ರೂಗಳ ಪ್ರೋತ್ಸಾಹ ಧನ ವಿತರಣೆ ಹಾಗೂ ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು ಪೂರೈಕೆ ಮಾಡುತ್ತಿದ್ದು ಜಿಲ್ಲೆಯ ಬಹುನಿರೀಕ್ಷಿತ ಶಾಶ್ವತ ನೀರಾವರಿ ಯೋಜನೆ ಸೇರಿದಂತೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ವಾಗ್ದಾನವನ್ನು ಅನುಷ್ಠಾನಗೊಳಿಸಲು ಸರಕಾರ ಬದ್ಧವಾಗಿದೆ ಎಂದರು.
ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃಧ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದು ಕೇಂದ್ರ ಸರಕಾರ ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಜಾರಿಗೊಳಿಸಲು ಬಿಡುಗಡೆ ಮಾಡಿದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕಾಲೋನಿಗಳಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವ ಜೊತೆಗೆ ಜಿಲ್ಲೆಯಲ್ಲಿ ಅಧಿಕ 4 ಸಾವಿರಕ್ಕೂ ಅಧಿಕ ಮನೆಗಳನ್ನು ಮಂಜೂರು ಮಾಡಿಸಿ ಬಡವರಿಗೆ ತಲುಪಿಸಲು ಪ್ರಮಾಣಿಕ ಪ್ರಯತ್ನ ನಡೆಸಲಾಗಿದೆ. ಈಗಾಗಲೇ ಹಲವರಿಗೆ ಸಹಾಯಧನ ಸಹ ಬಿಡುಗಡೆ ಮಾಡಲಾಗಿದ್ದು ತಮ್ಮ ಅಧಿಕಾರವಧಿಯಲ್ಲಿ ಸಮಾಜದ ಎಲ್ಲಾ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಿದ್ದು ಮತದಾರರು ಅಭಿವಣಧ್ಧಿಗಾಗಿ ಸಹಕಾರ ಸಂಘದ ಸಮಗ್ರ ಅಭಿವೃಧ್ಧಿಗಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕೋಚಿಮುಲ್ ನಿರ್ದೇಶಕ ಕೆ. ಗುಡಿಯಪ್ಪ ಮಾತನಾಡಿ ಕೇಂದ್ರ ಸರಕಾರ ಸಹಕಾರಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಅನೇಕ ರೀತಿಯ ಬದಲಾವಣೆ ತಂದಿದ್ದು ಸಹಕಾರಿ ಸಂಘಗಳ 05 ಮಹಾಸಭೆಯಲ್ಲಿ 03 ಸಭೆಯಲ್ಲಿ ಭಾಗವಹಿಸದ ಸದಸ್ಯರನ್ನು ಮತದಾನ ಮಾಡಲು ಹಾಗೂ ಸ್ಪರ್ಧಿಸಲು ಅವಕಾಶವಿರುವುದಿಲ್ಲ ಎಂದರು.
ಸಂಘದಲ್ಲಿರುವ 2352 ಸದಸ್ಯರಿಗೆ ಸಾಲಸೌಲಭ್ಯ, ಸಂಘದ ಸದಸ್ಯರಿಗೆ ಜನತಾಬಜಾರ್ಲ್ಲಿ ನಿತ್ಯ ಉಪಯೋಗಿ ವಸ್ತುಗಳ ಮಾರಾಟ, ಸೀಮೆ ಹಸು ಖರೀದಿ, ಕ್ರಿಮಿನಾಶಕ, ಬೀಜಗಳು,ಗೊಬ್ಬರ ನಿಗಧಿತ ಬೆಲೆಯಲ್ಲಿ ಮಾರಾಟ ಮಾಡುವ ಜೊತೆಗೆ ಪ್ರಿಂಟಿಂಗ್ ಪ್ರೆಸ್ ಸಹ ಖರೀದಿಗೆ ಅವಕಾಶವಿರುತ್ತದೆ ಎಂದರು.
ಸಭೆಯಲ್ಲಿ ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಂ. ಮುನಿಯಪ್ಪ, ಜಿ.ಪಂ. ಸದಸ್ಯ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಕಂಬದಹಳ್ಳಿ ಸತೀಶ್, ಜಿ.ಪಂ. ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಎನ್. ಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಪುರಸಭೆಯ ಮಾಜಿ ಸದಸ್ಯ ಸಮೀಉಲ್ಲಾ,ಅಬ್ದುಲ್ ಗಫೂರ್, ಕಾಂಗ್ರೆಸ್ ಮುಖಂಡರಾದ ಗೊರಮಡಗು ಕೃಷ್ಣಪ್ಪ, ಕ್ಯಾತಪ್ಪ ಮತ್ತಿತರರು ಹಾಜರಿದ್ದರು.