ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ತಡೆಯಿರಿ
ಕ.ಪ್ರ. ವಾರ್ತೆ ಗೌರಿಬಿದನೂರು ಸೆ.6
ರಸಗೊಬ್ಬರ, ಕೀಟನಾಶಕಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷಿಕ ಸಮಾಜ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಲ್ಲಿಕಾರ್ಜುನ್ ಮತ್ತು ರೈತರ ತಂಡ ಕೃಷಿ ಇಲಾಖೆಯನ್ನು ಒತ್ತಾಯಿಸಿದೆ.
ತಾಲೂಕಿನಲ್ಲಿ ಈಗ ಅಲ್ಪ ಸ್ವಲ್ಪ ಮಳೆಯಾಗಿದ್ದು, ಖುಷ್ಕಿ ಬೆಳೆಗೆ ರಸಗೊಬ್ಬರ ಅನಿವಾರ್ಯವಾಗಿರುವುದರಿಂದ ರೈತರು ಹೋಬಳಿ ಕೇಂದ್ರಗಳಲ್ಲಿರುವ ಕೃಷಿ ಇಲಾಖೆಯಿಂದ ಅನುಮೋದನೆ ಪಡೆದಿರುವ ಅಂಗಡಿಗಳಿಗೆ ತೆರಳಿದರೆ ಸರ್ಕಾರ ನಿಗದಿಪಡಿಸಿರುವ ಧರಕ್ಕಿಂತೆ ರು. 50, 100, ರಿಂದ 200 ವೆರೆಗೆ ಹೆಚ್ಚಿನ ಹಣ ಪಡೆಯುತ್ತಿದ್ದು, ರೈತರಿಗೆ ರಸಗೊಬ್ಬರ ಮಾರಾಟ ಮಾಡುವ ಯಾವುದೇ ಅಂಗಡಿ ಮಾಲೀಕರು ಅಧಿಕೃತ ರಸೀದಿ ನೀಡುತ್ತಿಲ್ಲ ಬದಲಿಗೆ ಒಂದು ಚೀಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ರೈತರ ಜೇಬಿಗೆ ಬರೆ: ತಾಲೂಕಿನ ಪ್ರತಿ ವರ್ಷ ಖುಷ್ಕಿ ಬೆಳೆಗೆ ಅಂದಾಜು 10ಸಾವಿರ ಟನ್ ಮಾರಾಟವಾಗುತ್ತದೆ ಅದು 2 ಲಕ್ಷ ಮೂಟೆಗಳಷ್ಟಿರಬಹುದೆಂದು ಅಂದಾಜಿಸಬಹುದು.
ಈ ಮಾರಾಟ ವಹಿವಾಟಿನಲ್ಲಿ ರೈತರಿಂದ ಅಂಗಡಿ ಮಾಲೀಕರು ವಸೂಲಿ ಮಾಡುವ ಹೆಚ್ಚಿನ ಲಾಭದ ಕಾಳದಂದೆ ಹಣ ಪ್ರತಿವರ್ಷ ಸುಮಾರು 10 ಕೋಟಿ ರೈತರ ಜೋಬಿಗೆ ಬರೆ ಬೀಳುತ್ತಿದೆ ಹೆಚ್ಚಿನ ಬೇಡಿಕೆ ಇರುವ ಯೂರಿಯಾ ವನ್ನು ತಾಲೂಕು ಕೇಂದ್ರವಾದ ಗೌರಿಬಿನೂರಿನಲ್ಲಿ ಮಾತ್ರ ಸಿಗುವುದಿಲ್ಲ ಎನ್ನುತ್ತಾರೆ.
ಹೋಬಳಿ ಕೇಂದ್ರಗಳಾದ ಮಂಚೇನಹಳ್ಳಿ ತೊಂಡೇಭಾವಿ, ಅಲಿಪುರ, ಹೊಸೂರು, ವಾಟದಹೊಸಹಳ್ಳಿ ಗಳಲ್ಲಿ ಕಾಳದಂದೆ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ ರು. 286 ಗಳಿಗೆ ಮಾರಾಟ ಮಾಡಬೇಕಿರುವ ಯೂರಿಯಾವನ್ನು ರು. 350, ರು. 420 ಮತ್ತು ರು. 450 ಕಳ್ಳತನದಲ್ಲಿ ಮಾರಾಟ ಮಾಡಲಾಗುತ್ತಿದೆ ಸುಮಾರು 100ರಿಂದ 134 ಹೆಚ್ಚಿನ ಹಣ ನೀಡಿದರೂ ಯೂರಿಯಾ ಸಿಗುತ್ತಿಲ್ಲ ಎಂದು ನಾರಸಿಗನಹಳ್ಳಿ ರೈತ ಅಶ್ವತ್ಥನಾರಾಯಣ ಹೇಳುತ್ತಾರೆ.
ಗ್ರೋಮೋರ್ ಒಂದೇ ವರದಾನ
ಕಾಳಸಂತೆ ಗೊಬ್ಬರ ಮಾರಾಟದಿಂದ ಕಂಗಾಲಾಗಿರುವ ರೈತರು ಖಾಸಗಿ ರಸಗೊಬ್ಬರ ಕೇಂದ್ರವಾದ ನಮ್ಮ ಗ್ರೋಮೋರ್ ಸೆಂಟರ್ ಮೊರೆಹೋಗಿದ್ದಾರೆ, ಗ್ರೋಮೋರ್ ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರವಾದರೂ ನ್ಯಾಯಯುತ ಬೆಲೆಯಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮತ್ತು ಬಿತ್ತನೆಬೀಜಗಳನ್ನು ಮಾರಾಟ ಮಾಡುತ್ತಿದ್ದು ಸೂಕ್ತ ಬಿಲಲ್ಗಳನ್ನು ನೀಡುತ್ತಿದ್ದು ಇವರು ನೀಡುವ ಯಾವುದೇ ಕೃಷಿ ಸಾಮಗ್ರಿಗಳು ಕಳಪೆಯಾದಲ್ಲಿ ಬಿಲ್ ಮುಖಾಂತರ ನ್ಯಾಯ ಪಡೆಯಬಹುದು ಎಂದು ಗ್ರೋಮೋರ್ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.