ಕುಂದುಕೊರತೆ ಸಭೆ ರದ್ದು
ಗುಡಿಬಂಡೆ: ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಗೆ ತಹಸೀಲ್ದಾರ್ ಶೈಲಜಾ ಗೈರು ಹಾಜರಾಗಿದ್ದನ್ನು ವಿರೋಧಿಸಿ ದಲಿತ ಮುಖಂಡರು ಸಭೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ಕುಂದುಕೊರತೆ ಸಮಿತಿಯ ಅಧ್ಯಕ್ಷರೂ ಆಗಿರುವ ತಾಲ್ಲೂಕು ದಂಡಾಧಿಕಾರಿಗಳೇ ಸಭೆಗೆ ಗೈರಾದರೇ ನಾವು ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎಂದರು.
ಸಿ.ಜೆ. ಗಂಗಪ್ಪ, ನರಸಿಂಹಪ್ಪ, ಗಂಗುಲಪ್ಪ, ನರಸಿಂಹಯ್ಯ, ದಲಿತ ಸೇನೆ ಕದಿರಪ್ಪ, ಬ್ರಾಹ್ಮಣರಹಳ್ಳಿ ಗಂಗರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜಣ್ಣ, ಶಿರಸ್ಥೆದಾರರ್ಶಿಬತ್ತುಲ್ಲಾ, ಜಿ.ಪಂ. ಎಂಜಿನಿಯರ್ ಜ್ಯೋತಿಪ್ರಕಾಶ್, ರವಿಕುಮಾರ್, ಮ.ಗ. ಹೆಗಡೆ, ರವಿಕುಮಾರ್ ಇತರರು ಹಾಜರಿದ್ದರು.