ಕ್ರೀಡಾಕೂಟದಲ್ಲಿ ಟೇಕಲ್ ಸಾಧನೆ
ಟೇಕಲ್: ಟೇಕಲ್ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2013-14ನೇ ಶೈಕ್ಷಣಿಕ ವರ್ಷದಲ್ಲಿ ಮಾಲೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 3 ಪ್ರಥಮ ಸ್ಥಾನ, 1 ತೃತೀಯ ಹಾಗೂ 1 ಸಮಾಧಾನ ಬಹುಮಾನ ಬಂದಿರುತ್ತದೆ.ಮಾಲೂರಿನ ಜೆಎಸ್ಎಸ್ ಕಾಲೇಜು ಆವರಣದಲ್ಲಿ ಏರ್ಪಡಿಸಿರುವ ಕ್ರೀಡಾ ಸ್ಪರ್ಧೆಗಳಲ್ಲಿ ಟೇಕಲ್ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯ ಸಿ.ಎ. ರತ್ನ 400 ಮೀ. ಓಟದಲ್ಲಿ ಪ್ರಥಮ, ದ್ವಿತೀಯ ಪಿಯುಸಿಯ ಡಿ. ವೆಂಕಟೇಶ್ 400 ಮೀ. ಓಟದಲ್ಲಿ ಪ್ರಥಮ, ದ್ವಿತೀಯ ಪಿಯುಸಿಯ ವಿ. ಹರೀಶ್ ಐ ಜಂಪಿಂಗ್(ಎತ್ತರ ಜಿಗಿತ) ಪ್ರಥಮ, ಪ್ರಥಮ ಪಿಯುಸಿಯ ಮೊಹಮ್ಮದ್ ಆಜಾಂ ಉದ್ದ ಜಿಗಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದು, ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕಿಯರು ರನ್ನರ್ಸ್ಬ್ಹುಮಾನ ಪಡೆದಿರುತ್ತಾರೆ. ಈ ನಿಟ್ಟಿನಲ್ಲಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಎ.ಕೆ. ಪಾಪಣ್ಣ ಅವರು ಅಭಿನಂದಿಸಿದ್ದಾರೆ.
ಗ್ರಾಮ ದೇವತೆ ವಾರ್ಷಿಕೋತ್ಸವ
ಕೋಲಾರ: ಹೊರವಲಯದ ಖಾದ್ರಿಪುರ ಗ್ರಾಮದಲ್ಲಿ ಗ್ರಾಮ ದೇವತೆ ಸವಾರಮ್ಮ ದೇವಾಲಯದ 105 ನೇ ವಾರ್ಷಿಕೋತ್ಸವ, ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ದೇವರ ಮೇರವಣಿಗೆ ಮತ್ತು ಭಜನೆ ಮಂಡಳಿಯವರಿಂದ ದೇವರ ಕೀರ್ತನೆಗಳು ಹಾಗೂ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಸವಾರಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಮತ್ತು ದೀಪೋತ್ಸವ ಹಾಗೂ ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ ಹಮ್ಮಿಕೊಳ್ಳಲಾಗಿದೆ.