ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ರೀಡೆಗಳಿಂದ ಮಾನಸಿಕ ಶಕ್ತಿ ವೃದ್ಧಿ: ಶಾಸಕ ಮಂಜುನಾಥ

Rashmi Kasaragodu
Updated On : 7 Sept 2013, 1:17 am

ಮುಳಬಾಗಲು: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮವಾದ ಆರೋಗ್ಯ ಮತ್ತು ಲವಲವಿಕೆ ಇರುತ್ತದೆಂದು ಶಾಸಕ ಕೊತ್ತೂರು ಮಂಜುನಾಥ್ ನುಡಿದರು.
ಪಟ್ಟಣದ  ನೇತಾಜಿ ಕ್ರೀಡಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಶಿಕ್ಷಕರ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಗುರುಭವನ ಪೂರ್ತಿಯಾದ ಮೇಲೆ ಸೆಪ್ಟೆಂಬರ್ 16ರಂದು ಶಿಕ್ಷಕರ ದಿನೋತ್ಸವ ಆಚರಿಸುವ ಸಲುವಾಗಿ ಇಂದು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದರು.
  ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ಮಾತನಾಡಿ, ತಾಲೂಕಿನ ಗ್ರಾಮೀಣ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ಅಗತ್ಯವಿದೆ. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಜಗದೀಶ್, ಗೌರವಾಧ್ಯಕ್ಷ ರಾಜಕುಮಾರ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ. ಜಗನ್ನಾಥ, ಕಾರ್ಯದರ್ಶಿ ಎಂ. ಶಿವಣ್ಣ,ದೈಹಿಕ  ಶಿಕ್ಷಕ ಸಂಘದ ಇ.ಶ್ರೀನಿವಾಸಗೌಡ, ಕೆಂಬೋಡಿ ನಾಗರಾಜ್, ಮುಖಂಡ ಗೊಲ್ಲಹಳ್ಳಿ ವೆಂಕಟೇಶ್, ಪ್ರಭಾಕರ್ ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement