ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಿಸ್ವಾರ್ಥ ಸೇವೆಗೆ ಅಳತೆ ಬೇಡ: ಶಿವಾರೆಡ್ಡಿ

Rashmi Kasaragodu
Updated On : 7 Sept 2013, 1:16 am

ಚಿಂತಾಮಣಿ: ನಿಸ್ವಾರ್ಥ ಸೇವೆ ಮಾಡುವಾಗ ಸಂತೋಷವನ್ನು ಅಳತೆ ಮಾಡಲು ಸಾಧ್ಯವೇ ಸೇವೆ ಬದುಕಿನ ಪ್ರಮುಖ ಮೌಲ್ಯವಾಗಿದೆ. ಇದು ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ.
 ಗಾಂಧೀಜಿಯವರು ಸೇವೆಗೆ ಬಹುದೊಡ್ಡ ಮೌಲ್ಯ ತಂದುಕೊಟ್ಟಿದ್ದಾರೆ. ಶಿಕ್ಷಕರ ಸೇವೆ ನಮ್ಮ ಗೌರವವನ್ನು ಹೆಚ್ಚಿಸುತ್ತದೆ. ಶಿಕ್ಷಕರ ಸೇವಾ ಮನೋಭಾವ ಬೆಳೆದಷ್ಟು ದೇಶ ನೈತಿಕವಾಗಿ ಸದೃಢವಾಗುತ್ತೆಂದು ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕೈವಾರ ಶಾಲಾ ಶಿಕ್ಷಕ ಶಿವಾರೆಡ್ಡಿ ಅವರು ಓದುಗರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಕ್ಕಳ ಶಾರೀರಿಕ, ಮಾನಸಿಕ ಮತ್ತು ನೈತಿಕತೆಯ ಅಂಶಗಳಾದ ತಾಳ್ಮೆ, ಸಹನೆ, ಸಂಯಮ, ಅಜ್ಞಾನಪಾಲನೆ, ನಿಸ್ವಾರ್ಥ ಮನೋಭಾವ ಮುಂತಾದ ಸದ್ಗುಣಗಳು ಬೆಳೆಯುವಂತ ನೈತಿಕ ಶಿಕ್ಷಣದೊಂದಿಗೆ ನೀತಿ,ನ್ಯಾಯ, ಧರ್ಮ, ನಮ್ಮ ಪರಂಪರೆ ಹಾಗೂ ಸಂಸ್ಕೃತಿಯ ಅರಿವನ್ನುಂಟುಮಾಡುವಂತೆ ಸಮಸ್ಥ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಶುಭಾಷಯಗಳೊಂದಿಗೆ ಶಿವಾರೆಡ್ಡಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement