ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪುರಸಭೆ ಧೋರಣೆ ಖಂಡಿಸಿ ಕರವೇ ಪ್ರತಿಭಟನೆ

Rashmi Kasaragodu
Updated On : 7 Sept 2013, 1:16 am

ಮಾಲೂರು: ಪಟ್ಟಣದಲ್ಲಿ ಶುಚಿತ್ವ ಕಾಪಾಡುವ ಸಲುವಾಗಿ ತಂದಿರುವ ಕಂಟೈನರ್ಗಳು ಮೂರು ತಿಂಗಳಾದರೂ ಬಡಾವಣೆಗಳಿಗೆ ವಿಲೇವಾರಿ ಮಾಡದೆ ಪುರಸಭೆ ಅವರಣದಲ್ಲಿ ತುಕ್ಕು ಹಿಡಿಯಲು ಬಿಟ್ಟಿರುವ ಪುರಸಭೆ ಧೋರಣೆ ಖಂಡಿಸಿ ಇಲ್ಲಿನ ಕರವೇ ಕಾರ್ಯಕರ್ತರು ಶುಕ್ರವಾರ ಇಲ್ಲಿನ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಆವರಣದಲ್ಲೇ ತುಕ್ಕು ಹಿಡಿಯುತ್ತಿವೆ: ಪಟ್ಟಣದ ಬಡಾವಣೆಗಳಲ್ಲಿ ಶುಚಿತ್ವ ಕಾಪಾಡಲು ಮೂರು ತಿಂಗಳ ಹಿಂದೆ ತರಸಲಾಗಿದ್ದ 20 ಕಂಟೈನರ್ ಖರೀದಿಸಿದ್ದರೂ ಅವುಗಳನ್ನು ಅವಶ್ಯ ವಿರುವ ಕಡೆ ವಿಲೇವಾರಿ ಮಾಡದೆ ಪುರಸಭೆ ಆವರಣದಲ್ಲೇ ಕೊಳೆಯಲು ಬಿಟ್ಟಿರುವ ಹಿಂದೆ ಪುರಸಭೆ ಅಭಿಯಂತರರ ನಿರ್ಲಕ್ಷವೇ ಕಾರಣವಾಗಿದೆ ಎಂದು ದೂರಿದ ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಶುಚಿತ್ವದ ಕೂರತೆಯಿಂದ ಡೆಂಘೀ, ಮಲೇರಿಯಾ ಸೇರಿದಂತೆ ಇತರೆ ರೋಗಗಳು ಹೆಚ್ಚಾಗುತ್ತಿದ್ದು, ಈ ಕೊಡಲೇ ಅವಶ್ಯವಿರುವ ಕಡೆ ಕಂಟೈನರ್ಗಳನ್ನು ಇಡುವಂತೆ ಒತ್ತಾಯಿಸಿದರು. ಮುಖ್ಯಾಧಿಕಾರಿ ಭರವಸೆ: ಸಂಘಟನೆಯ ಅಧ್ಯಕ್ಷ ಮಂಜುನಾಥ್ ಗೌಡ,ಪುರಸಭೆ ಸದಸ್ಯ ಮುರಳೀಧರ್, ಬ.ಶ್ರೀನಿವಾಸ್ ರ ಮಾತಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ಹಾಗೂ ಅಭಿಯಂತರೆ ಭಾನುಮತಿ ರವರು ಬಡಾವಣೆಗಳಲ್ಲಿ ಸ್ಠಳ ಗುರ್ತಿಸಿ ಅಲ್ಲಿ ಪ್ಲಾಟ್ಫಾರಂ ನಿರ್ಮಿಸಿ ನಂತರ ಅದರ ಮೇಲೆ ಕಂಟೈನರ್ ಇಡಬೇಕಾದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಇನ್ನೆರಡು ದಿನಗಳಲ್ಲಿ ಬಡಾವಣೆಗಳಿಗೆ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು. ತಾಲೂಕು ಕರವೇ ಮುಖಂಡರಾದ ಎಸ್.ಎಂ.ರಾಜು,ಪ್ರಸನ್ನ ಕುಮಾರ್, ರವಿ, ನವೀನ್, ಚನ್ನಕೃಷ್ಣ, ಲವ-ಕುಶ, ಚಲಪತಿ, ಆಟೋ ಮಂಜು, ಶ್ಯಾಮ್ ಪ್ರಸಾದ್ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement