'ಮೌಲ್ಯಾಧಾರಿತ ಶಿಕ್ಷಣ ರೂಢಿಸಿಕೊಳ್ಳಿ'
ಶಿಡ್ಲಘಟ್ಟ: ಆದರ್ಶ ಚೇತನ ಸರ್ವಪಲ್ಲಿ ರಾಧಾಕೃಷ್ಣ ಅವರ ಮೌಲ್ಯಾಧಾರಿತ ಶಿಕ್ಷಣವನ್ನು ರೂಢಿಸಿಕೊಳ್ಳಬೇಕೆಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ರಾಜಣ್ಣ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ತಾಲೂಕಿನಲ್ಲಿ ಸುಮಾರಿ 200 ಶಿಕ್ಷಕರಿದ್ದು ಆದರ್ಶ ಶಿಕ್ಷಕರಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಇದೆ ವೇಳೆ ತಾಪಂ ಅಧ್ಯಕ್ಷ ಯರಬಚ್ಚಪ್ಪ, ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯನಿರತ ಶಿಕ್ಷಕರು ಕಾರಣಾಂತರಗಳಿಂದ ನಿಧನರಾಗಿದ್ದು ಅವರಿಗೆ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಂಕ್ ಮುನಿಯಪ್ಪ. ಶಿವಲೀಲಾ ರಾಜಣ್ಣ ಪ್ರಭಾವತಿ ಸುರೇಶ್, ರಾದಿಕಾ ಮಂಜುನಾಥ್, ಮಂಜುಳಾ, ಮುನಿರೆಡ್ಡಿ, ನಂದಕುಮಾರ್, ಗುರುರಾಜ್, ನೇತ್ರಾ ಲಕ್ಷೀಪತಿ, ಶ್ರೀನಿವಾಸ್, ಪಿ.ವಿ. ನಾಗರಾಜ್, ಉಮೇಶ್ ಸೇರಿದಂತೆ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.