ಸ್ವಯಂಪ್ರೇರಿತವಾಗಿ ಮಾರ್ವೆ ಮೀನು ಕುಂಟೆ ನಾಶ
ಚಿಂತಾಮಣಿ: ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾರ್ವೆ(ಆಫ್ರಿಕನ್ ಕ್ಯಾಟ್) ಮೀನು ಸಾಕುವ ಕುಂಟೆಗಳನ್ನು ಮಾಲೀಕರು ಕಾನೂನಿಗೆ ಗೌರವಿಸಿ ಸ್ವಯಂಪ್ರೇರಕರಾಗಿ ಜೆಸಿಬಿ ಯಂತ್ರದ ಮುಖಾಂತರ ನಾಶಪಡಿಸಿ ನೆಲಸಮ ಮಾಡಿದರು.
ತಾಲೂಕಿನ ಚಿನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಮಾರ್ವೆ(ಆಫ್ರಿಕನ್ ಕ್ಯಾಟ್) ಮೀನು ಪೋಷಿಸಿ ಸಾಕುವ ಕುಂಟೆಗಳನ್ನು ಮಾಲೀಕರು ಹಾಗೂ ಹಲವು ರೈತರು ತಾಲೂಕು ದಂಡಾಧಿಕಾರಿ ಜಾರಿ ಮಾಡಿದ ಪತ್ರಕ್ಕೆ ಗೌರವ ನೀಡಿ ಸ್ವಯಂಪ್ರೇರಿತರಾಗಿ ಜೆಸಿಬಿ ಯಂತ್ರದ ಮೂಲಕ ಕುಂಟೆಗಳನ್ನು ನಾಶಪಡಿಸಿ ನೆಲಸಮ ಮಾಡಿದರು.
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಮಾರ್ವೆ(ಆಫ್ರಿಕನ್ ಕ್ಯಾಟ್) ಮೀನು ಸರ್ಕಾರ ಸಾಕಾಣಿಕೆ ಮತ್ತು ಮಾರಾಟಕ್ಕೆ ಬ್ರೇಕ್ ಹಾಕಿದರೂ ಸ್ಥಳೀಯರು(ಮೀನುಗಳು ಸಾಕಾಣಿಕೆ ಮಾಡುತ್ತಿರುವ ರೈತರು) ತಾಲೂಕು ದಂಡಾಧಿಕಾರಿಗೆ ನೂರಾರು ಜನರು ಮಾನವೀಯ ದೃಷ್ಟಿಯಿಂದ ಕಾಲಾವಕಾಶ ನೀಡಬೇಕೆಂದು ಕೋರಿ ಮನವಿ ಪತ್ರ ಸಲ್ಲಿಸಿದ್ದರು.