ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

12ರಿಂದ ವಾರ್ಷಿಕೋತ್ಸವ

Rashmi Kasaragodu
Updated On : 8 Sept 2013, 1:01 am

ಶಿಡ್ಲಘಟ್ಟ: 8 ವರ್ಷಗಳ ಹಿಂದಷ್ಟೇ ಸ್ಥಾಪಿತವಾದ ಶ್ರೀಕ್ಷೇತ್ರ ಶಿರಡಿ ಸಾಯಿನಾಥ ಜ್ಞಾನ ಮಂದಿರ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿದ್ದು ಕೋಲಾರ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಧಾಮರ್‌ಕ ಕಾರ್ಯಕ್ರಮಗಳೊಂದಿಗೆ ಹಲವು ಹತ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಸೆ.12,13,14ರಂದು ತನ್ನ 8ನೇ ವಾರ್ಷಿಕೋತ್ಸವಕ್ಕೆ ಸಜ್ಜಾಗುತ್ತಿದೆ.
ವಿಶೇಷ ಸೊಚನೆ: ಅನ್ನ ಕಲ್ಪ ಶಾಂತಿ ಹೋಮ ಮತ್ತು ಸೀತಾ ರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಳಬಹುದಾಗಿದ್ದು ಮೂರು ದಿನಗಳ ಮುಂಚಿತವಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳಬೆಕೆಂದು ಕೋರಲಾಗಿದೆ.



ಗಣೇಶೋತ್ಸವ; ಶಾಂತಿ ಸಭೆ
ಶಿಡ್ಲಘಟ್ಟ: ಗಣೇಶ ಮೂರ್ತಿ ವಿಸರ್ಜನೆಯ ಸಮಯದಲ್ಲಿ ಮದ್ಯಪಾನ ಮಾಡಿ ಬಂದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಡಿಎಸ್‌ಪಿ ದೇವಯ್ಯ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಣೇಶ ವಿಸರ್ಜನೆಯ ಶಾಂತಿ ಸಭೆಯನ್ನು ಏರ್ಪಡಿಸಿದ್ದು ಅದರಲ್ಲಿ ಭಾಗವಹಿಸಿ ಡಿಎಸ್‌ಪಿ ದೇವಯ್ಯ ಮಾತನಾಡುತ್ತಾ, ಗಣೇಶ ವಿಸರ್ಜನೆಯು ಪುಣ್ಯ ಕಾರ್ಯವಾಗಿದ್ದು ಶ್ರದ್ದಾ ಭಕ್ತಿಗಳಿಂದ ಆಚರಿಸಬೇಕೆಂದು ಕರೆ ನೀಡಿದರು. ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕಡ್‌ಡಾಯವಾಗಿದು ಅನುಮತಿ ಪಡೆಯದೆ ಗಣಪತಿ ವಿಗ್ರಹ ಪ್ರತಿಷ್ಟಾಪನೆ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳಲಾಗುವುದೆಂದು ತಿಳಿಸಿದರು.
ಗಣೇಶ ವಿಗ್ರಹದ ನಿರ್ವಹಣೆ, ಅಲಂಕಾರ, ಕಾರ್ಯಕ್ರಮ, ಹಾಗೂ ಗಣೇಶ ವಿಸರ್ಜನೆಯ ಪೊರ್ಣ ವರಿದಿಯನ್ನು ಆಧರಿಸಿ ಪೊಲೀಸ್ ಇಲಾಖೆಯಿಂದ 3 ಬಹುಮಾನಗಳನ್ನು ಇಡಲಾಗಿದ್ದು ಆಯ್ಕೆಗೆ ಹೊರಗಿನ ಸಿಬ್ಬಂದಿಯನ್ನು ಕರೆಸಲಾಗುವುದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಸ್ಲೀಂ ಬಾಂದವರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಆರಕ್ಷಕ ವೃತ್ತ ನೀರಿಕ್ಷಕ ಜಗದೀಶ್, ಗ್ರಾಮಾಂತರ ಠಾಣೆಯ ಪಿಎಸ್.ಐ ಹನುಮಂತಯ್ಯ, ಪುರ ಠಾಣೆ ಪಿ.ಎಸ್.ಐ ಪುರುಷೊತ್ತಮ್, ಸೈಯದ್ ನಾಸಾರ್ ಅಹಮದ್, ಮಕಸೊದ್, ಅಬ್ದುಲ್ ಹಜೀಜ್, ತನ್ವೀರ್, ಸುಹೇಲ್, ನಯಾಜಜ್ಪಾಷಾ, ವಿನಾಯಕ ಹಾಜರಿದ್ದರು.


ವೃದ್ಧೆ ನಾಪತ್ತೆ
ಮೈಸೂರು: ವಿಜಯನಗರ 2ನೇ ಹಂತ ವಾಣಿವಿಲಾಸ ಲೇಔಟ್ ನಿವಾಸಿ ಕೆ.ಎಚ್. ಹಲಗೇಗೌಡ ಎಂಬವರ ಪತ್ನಿ ಯಶೋಧಮ್ಮ (67) ಸೋಮವಾರ ಜಯಲಕ್ಷ್ಮಿಪುರಂ ವೈದ್ಯರ ಬಳಿ ಆರೋಗ್ಯ ತಪಾಸಣೆಗೆ ಹೋದವರು ನಾಪತ್ತೆಯಾಗಿದ್ದಾರೆ. ಕಾಣೆಯಾಗಿರುವ ತನ್ನ ತಾಯಿಯನ್ನು ಪತ್ತೆ ಮಾಡಿಕೊಡುವಂತೆ ಎಚ್.ಬಿ. ಆಶಾ ಪೊಲೀಸರಿಗೆ ದೂರು ನೀಡಿದ್ದಾರೆ.  ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418317 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement