ಉಚಿತ ಗಣೇಶ ವಿತರಣೆ
ಚಿಕ್ಕಬಳ್ಳಾಪುರ: ಗೌರಿ-ಗಣೇಶ ಹಬ್ಬದ ಪ್ರಯುಕ್ತ ರೈತ ಮುಖಂಡ ಯಲುವಳ್ಳಿ ಎನ್. ರಮೇಶ್ ಅವರು ಉಚಿತವಾಗಿ ಗಣಪತಿ ಮೂರ್ತಿಗಳನ್ನು ವಿತರಿಸಿದರು.
ನಗರದ ಬಿ.ಬಿ. ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ತಾಲೂಕಿನ ಜಾತವಾರ, ಕುಪ್ಪಳ್ಳಿ, ನಾಯನಹಳ್ಳಿ, ಅಜ್ಜವಾರ. ಯಲುವಹಳ್ಳಿ ಸೇರಿದಂತೆ ಇತರೆ ಗ್ರಾಮದ ವಿನಾಯಕ ಗೆಳೆಯರ ಸಂಘಗಳಿಗೆ ಪೂಜಾ ಸಾಮಗ್ರಿಗಳ ಜತೆಗೆ 5 ಅಡಿ ಎತ್ತರದ ಗಣಪತಿ ಮೂರ್ತಿಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ವರ್ಷ ಚಿಕ್ಕವರು ದೊಡ್ಡವರು, ಜಾತಿಮತ ಭೇದಭಾವ ನೋಡದೇ ಅನೇಕರು ಬೀದಿಗಳಲ್ಲಿ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು ಇದು ಜನರಲ್ಲಿ ಐಕ್ಯತೆಯನ್ನು, ಧಾರ್ಮಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಗಣಪತಿ ಮೂರ್ತಿಯನ್ನಿಟ್ಟು ಶ್ರದ್ಧಾಭಕ್ತಿಯಿಂದ ಪೂಜೆಯನ್ನು ಸಲ್ಲಿಸಬೇಕು. ಯಾರೇ ಆಗಲಿ ದೇವರ ಹೆಸರಿನಲ್ಲಿ ಕಳಂಕ ಬರುವ ರೀತಿಯಲ್ಲಿ ವರ್ತಿಸಬಾರದು. ಪ್ರಮುಖವಾಗಿ ಘರ್ಷಣೆಗಳಿಗೆ ಆಸ್ಪದ ನೀಡಬಾರದೆಂದು ಸಲಹೆ ನೀಡಿದರು.