ಕೆನರಾ ಬ್ಯಾಂಕಿನ ಶಾಖೆ ಉದ್ಘಾಟನೆ
ಗೌರಿಬಿದನೂರು: ಗ್ರಾಮೀಣ ಭಾಗದಲ್ಲಿ ಇಂದು ಬ್ಯಾಂಕ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಹಳ್ಳಿಗಳಲ್ಲಿ ಶಾಖೆಗಳನ್ನು ಪ್ರಾರಂಭ ಮಾಡುವ ಮೂಲಕ ಗ್ರಾಹಕರ ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆಯನ್ನು ಕೆನರಾ ಬ್ಯಾಂಕ್ ಒದಗಿಸುತ್ತಿದೆ ಎಂದು ಕೋಚಿಮುಲಲ್ನ ಮಾಜಿ ಅಧ್ಯಕ್ಷ ಎಸ್. ರಮೇಶ್ ಕೆನರಾ ಬ್ಯಾಂಕಿನ ಸೇವೆಯನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಕೆನರಾ ಬ್ಯಾಂಕಿನ ಡಿ.ಜಿ. ಎಂ. ಸಂಪತ್ತುಕುಮಾರ್, ಎಜಿಎಂ ಸ್ವಾಮಿ, ಆರ್.ಜಿ. ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ವತ್ಸಲಾ, ಹಿರಿಯ ವ್ಯವಸ್ಥಾಪಕ ಎಂ.ಜಿ. ಜನಾರ್ಧನರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮದ ಮುಖ್ಯಸ್ಥರು ಹಾಜರಿದ್ದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಕೋಲಾರ: ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕಗಳನ್ನು ಪಡೆದಿರುವ ಯಾದವ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಕೋಲಾರ ಜಿಲ್ಲಾ ಯಾದವ ಸಂಘ ಮತ್ತು ತಾಲೂಕು ಯಾದವ ಕ್ಷೇಮಾಭಿವೃದ್ಧಿ ಸಂಘ ದಿಂದ ಪುರಸ್ಕರಿಸಲು ಅರ್ಜಿ ಆಹ್ವಾನಿಸಲಾಗಿದೆ. 2013-2013ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳು 10 ದಿನಗಳೊಳಗಾಗಿ ತಮ್ಮ ಸ್ವವಿಳಾಸ, ಅರ್ಜಿ ಜೊತೆಗೆ ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಯಾದವ ವಿದ್ಯಾರ್ಥಿ ನಿಲಯ, ಚೌಡೇಶ್ವರಿ ನಗರ, ಬೈಪಾಸ್ ಪಕ್ಕ, ಸಾಮಿಲ್ ಹಿಂಭಾಗ, ಟೇಕಲ್ ರಸ್ತೆ, ಕೋಲಾರ ಇಲ್ಲಿಗೆ ಕಳುಹಿಸಬೇಕೆಂದು ಅಧ್ಯಕ್ಷರಾದ ಕೆ.ಎಂ. ವೆಂಕಟರವಣ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.