ದರೋಡೆ; ಇಬ್ಬರ ಬಂಧನ
ಚಿಂತಾಮಣಿ: ಯಾತ್ರಾಸ್ಥಳಕ್ಕೆ ಬಂದಿದ್ದ ಯಾತ್ರಾರ್ಥಿಗಳಿಗೆ ಯುವಕರ ಗುಂಪೊಂದು ಮಾರಕಾಸ್ತ್ರ ತೋರಿಸಿ ಹಲ್ಲೆ ಮಾಡಿ ದೋಚಿ ಪರಾರಿಯಾಗುತ್ತಿದ್ದ ಇಬ್ಬರನ್ನು ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿ ನೆಲೆಸಿರುವ ಅಮ್ಮಾಜಾನ್ ಬಾಬಾಜಾನ್ ದರ್ಗಾಗೆ ಚಿಕ್ಕಬಳ್ಳಾಪುರ ನಿವಾಸಿಗಳಾದ ಸುರೇಶ್, ಸನಾವುಲ್ಲಾ ಸೇರಿದಂತೆ 5 ಜನರು ಪೂಜೆ ಸಲ್ಲಿಸಲು ಬಂದಿದ್ದರು. ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಯಲ್ಲಿ ಅಡ್ಡಗಟ್ಟಿದ ದುಶ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ ಹಲ್ಲೆ ಮಾಡಿ ಸಾವಿರಾರು ರೂಪಾಯಿ ನಗದು ಹಾಗೂ ಬೆಲೆ ಬಾಳುವ 6 ಮೊಬೈಲ್ಗಳನ್ನು ದೋಚಿದ್ದರು. ಚಿಂತಾಮಣಿ ಪಟ್ಟಣದ ಚಾಂದ್ ಪಾಷಾ, ವಾಹಿದ್ ಮತ್ತು ಗಿಡ್ಡು ಆರೋಪಿಗಳು. ಇವರು ಪರಾರಿಯಾಗುತ್ತಿದ್ದ ವೇಳೆ ಗ್ರಾಮಸ್ಥರ ಸಹಕಾರದೊಂದಿಗೆ ಪೊಲೀಸರು ಚಾಂದ್ ಪಾಷಾ ಹಾಗೂ ವಾಹಿದ್ನನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.