ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಿ ಟಾಡ್ಲರ್ಸ್ ಮಾಂಟೆಸ್ಸರಿ ಶಾಲೆ ಸಾಧನೆ

Rashmi Kasaragodu
Updated On : 8 Sept 2013, 1:01 am

ಚಿಂತಾಮಣಿ: ದಿ ಟಾಡ್ಲರ್ಸ್ ಮಾಂಟೆಸ್ಸರಿ ಶಾಲೆಯ ವಿದ್ಯಾರ್ಥಿಗಳು 2013-14 ನೇ ಸಾಲಿನಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಮತ್ತು ಪೈಕಾ ಗ್ರಾಮೀಣ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲ್ಲೂಕು ಮಟ್ಟದಿಂದ ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಶಾಲಾ ಅಧ್ಯಕ್ಷೆ ಬಿ.ಆರ್. ಸವಿತಾ ಅಭಿನಂದಿಸಿದ್ದಾರೆ.
ಪಟ್ಟಣದಲ್ಲಿ ಜಾನ್ಸಿರಾಣಿ ಲಕ್ಷ್ಮಿಬಾಯಿ ಮೈದಾನದಲ್ಲಿ ನಡೆದ 2013-14 ನೇ ಸಾಲಿನಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಮತ್ತು ಪೈಕಾ ಗ್ರಾಮೀಣ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ದಿ ಟಾಡ್ಲರ್ಸ್ಮಾಂಟಸ್ಸರಿ ಶಾಲೆಯ ವಿದ್ಯಾರ್ಥಿ ಆರ್. ಪ್ರತ್ಯೂಷ ಯೋಗ ಮತ್ತು ಕರಾಟೆಯಲ್ಲಿ ಪ್ರಥಮ ಸ್ಥಾನ ಹಾಗೂ 14 ವರ್ಷದೊಳಗಿನ ವಿದ್ಯಾರ್ಥಿಗಳಾದ ಕಿರಣ್, ಚೇತನ್ ನಾಯಕ್, ಶ್ರವಣ್‌ಕುಮಾರ್ ಯೋಗ, ಕುಸ್ತಿ ಮತ್ತು ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆಂದು ಶಾಲೆಯ ಆಡಳಿತ ಮಂಡಳಿ ಮುಕ್ತ ಕಂಠದಿಂದ ವಿದ್ಯಾರ್ಥಿಗಳನ್ನು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಕಿ ಕವಿತಾ, ಯೋಗ ಗುರು ಗೋವಿಂದ್, ಕರಾಟೆ ಶಿಕ್ಷಕ ಲೋಕೇಶ್ ಸೇರಿದಂತೆ ಪೋಷಕರು ಶಾಲೆಯ ಆಡಳಿತ ವರ್ಗ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement