ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿಕ್ಷಣದಿಂದ ಜೀವನ ಬದಲಾವಣೆ: ಸ್ವಾಮೀಜಿ

Rashmi Kasaragodu
Updated On : 8 Sept 2013, 1:02 am


ಚಿಕ್ಕಬಳ್ಳಾಪುರ: ಶಿಕ್ಷಣವು ಮಾರ್ಗದರ್ಶನ ನೀಡಿ ಜೀವನವನ್ನು ಬದಲಾಯಿಸುತ್ತದೆ. ಶಿಕ್ಷಣವನ್ನು ಪಡೆದುಕೊಂಡವರು ತಮ್ಮ ಜ್ಞಾನವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಸಮಾಜವನ್ನು ನಿರ್ಮಾಣಕ್ಕಾಗಿ ಶ್ರಮಿಸಬೇಕೆಂದು ಅದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ನಗರದ ಹೊರ ವಲಯದಲ್ಲಿರುವ ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯವನ್ನು ವಹಿಸಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಿಕ್ಷಣವನ್ನು ಪಡೆದುಕೊಂಡು ಉದ್ಯೋಗವನ್ನರಿಸಿಕೊಂಡು ಹೋಗುತ್ತಿರುವ ವಿದ್ಯಾರ್ಥಿಗಳು ಸಾಧನೆ ಮಾಡುವುದರ ಜತೆಗೆ ಜನ್ಮಕೊಟ್ಟ ತಂದೆ ತಾಯಿಗಳಿಗೆ,ತಿದ್ದಿ ತೀಡಿದ ಗುರುಗಳಿಗೆ,ದೇಶಕ್ಕೆ ಕೀರ್ತಿಯನ್ನು ತರಬೇಕೆಂದರು.
ಶಾಸಕ ಡಾ. ಕೆ. ಸುಧಾಕರ್ ಮಾತನಾಡಿ, ಏನಾದರೂ ಆಗಲಿ ಮೊದಲು ಮಾನವರಾಗಬೇಕು. ಯಾರೇ ಆಗಲಿ ಮೌಲ್ಯಗಳು, ಸಂಸ್ಕೃತಿ, ಕಲೆ, ಮಾನವೀಯತೆಯನ್ನು ಮರೆಯಬಾರದು ಎಂದು ಹೇಳಿದರು.
ಹಲವರು ಎಂಜಿನಿಯರಿಂಗ್ಪ್‌ದವಿಗಳಿಸಿ ಬೇರೆ ಯಾವುದೋ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಇಂದು ನಮ್ಮೆದುರು ಇರುವ ನಿರ್ಮಲಾನಂದನಾಥ ಶ್ರೀಗಳೇ ಇದಕ್ಕೆ ಸಾಕ್ಷಿ. ಎಂಟೆಕ್ಪ್‌ದವೀಧರರಾದ ಇವರು ಇಂದು ಅಧ್ಯಾತ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಾರ್ಯ ಅನನ್ಯವಾದುದು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಕಾಲೇಜಿನ ಎರೊನಾಟಿಕಲ್ ವಿಭಾಗದ ನಿರ್ದೇಶಕ ಪಿ.ಎಸ್. ಕೃಷ್ಣನ್, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಶೈಲೇಂದ್ರನಾಥ ಸ್ವಾಮೀಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement