ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರಗಳ್ಳತನ

Rashmi Kasaragodu
Updated On : 8 Sept 2013, 1:00 am

ಚಿಂತಾಮಣಿ: ವಾಯುವಿಹಾರಕ್ಕೆ ತೆರಳಿದ ವೃದ್ಧೆಯ ಲಕ್ಷಾಂತರ ಮೌಲ್ಯದ ಬಂಗಾರದ ಸರವನ್ನು ಅಪರಿಚಿತ ಇಬ್ಬರು ಯುವಕರು ಅಪಹರಿಸಿರುವ ಘಟನೆ ಶನಿವಾರ ಬೆಳಗ್ಗೆ ಅಂಜನಿ ಬಡಾವಣೆಯಲ್ಲಿ ನಡೆದಿದೆ.
ಪಟ್ಟಣದ ಪೊಲೀಸ್ ವಸತಿ ಗೃಹಗಳ ಪಕ್ಕದಲ್ಲಿರುವ ಅಂಜನಿ ಬಡಾವಣೆಯ ನಿವಾಸಿ ನಾಗರತ್ನಮ್ಮ ಎಂಬ ವೃದ್ಧೆ ಶನಿವಾರ ಬೆಳಗ್ಗೆ ವಾಯುವಿಹಾರಕ್ಕೆಂದು ಹೋಗಿ ಬರುತ್ತಿರುವಾಗ ಅಪರಿಚಿತ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು 35 ಗ್ರಾಂ. ತೂಕವುಳ್ಳ ಸರವನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪಟ್ಟಣದ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement