ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೇವಾ ಭದ್ರತೆಗೆ ಆಗ್ರಹ

Rashmi Kasaragodu
Updated On : 8 Sept 2013, 1:01 am

ಕನ್ನಡಪ್ರಭವಾರ್ತೆ, ಕೋಲಾರ, ಸೆ.7
ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ವೇತನ ಹೆಚ್ಚಳ ಹಾಗೂ ಇನ್ನಿತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಿದೆ.
ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ಒಕ್ಕೂಟದ ರಾಜ್ಯಾಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ರಮಾನಂದ, ರಾಜ್ಯ ಸಮಿತಿ ಸದಸ್ಯ ಆರ್. ಚೌಡರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ನಾಗನಾಳ ಮುನಿಯಪ್ಪ ಅವರುಗಳು ಹಿರಿಯ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡದೆ ಇರುವುದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ದೂರಿದ್ದಾರೆ.
ಪ್ರತಿ ಶೈಕ್ಷಣಿಕ ಸಾಲಿನಲ್ಲಿ ತಿಂಗಳಿಗೆ 8ರಿಂದ 10 ಸಾವಿರ ರು. ಗೌರವ ವೇತನವನ್ನು ವರ್ಷದ ಕೊನೆಯಲ್ಲಿ ನೀಡುತ್ತಾ ಬಂದಿರುವುದರಿಂದ ಜೀವನ ನಡೆಸುವುದು ತುಂಬಾ ದುಸ್ತರವಾಗಿದೆ. ಜೊತೆಗೆ ಒಂದೇ ಕಾಲೇಜಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಆದೇಶ ಹೊರಡಿಸಿರುವುದರಿಂದ ಕೊಡುವ ಅಲ್ಪ ಗೌರವ ಧನದಲ್ಲಿ ಸಂಸಾರ ನಿರ್ವಹಿಸುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಈಗಿನ ಬೆಲೆಗಳಲ್ಲಿ ಬರುವ ಗೌರವ ಧನಕ್ಕಿಂತ ದುಪ್ಪಟ್ಟು ಸಾಲ ಮಾಡಬೇಕಾಗಿದೆ. ಉನ್ನಿತ ಶಿಕ್ಷಣ ಸಚಿವರು ಸೆ.25ರೊಳಗೆ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಸೆ.25 ರಿಂದ ಅನಿರ್ದಿಷ್ಟ ಧರಣಿಯನ್ನು ರಾಜ್ಯಾದ್ಯಂತ  ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅತಿಥಿ ಉಪನ್ಯಾಸಕರ ಜೊತೆಗೆ ಕುಟುಂಬಗಳ ಸದಸ್ಯರೊಂದಿಗೆ ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆಗಳು: 2005ರಿಂದ ಇಲ್ಲಿಯತನಕ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಈಗ ನೀಡುತ್ತಿರುವ  ಮಾಸಿಕ 8ರಿಂದ 10 ಸಾವಿರ ಗೌರವ ಧನವನ್ನು 25 ಸಾವಿರಕ್ಕೆ ಹೆಚ್ಚಿಸಿ ಪ್ರತಿ ತಿಂಗಳು ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು. ಅತಿಥಿ ಉಪನ್ಯಾಸಕರನ್ನು ಇನ್ನು ಮುಂದೆ ನೇಮಕ ಮಾಡಿಕೊಳ್ಳಲು ವಯೋವುತಿ 45 ವರ್ಷಕ್ಕೆ ನಿಗಧಿಪಡಿಸಲು  
ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದ್ದು, ಇದನ್ನು ಜಾರಿಗೆ ತಂದರೆ 1995ರಿಂದ ಅರೆಕಾಲಿಕ, 2005ರಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 6 ಸಾವಿರ ಉಪನ್ಯಾಸಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಬಯೋವುಟ್ರಿಕ್ ಅಳವಡಿಸುತ್ತಿದ್ದು ಇದನ್ನು ಅತಿಥಿ ಉಪನ್ಯಾಸಕರಿಗೆ ಅನ್ವಯಿಸದಂತೆ ಆದೇಶ ಹೊರಡಿಸಬೇಕೆಂದು ಸಹ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement