ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

501 ಗಣೇಶ ಮೂರ್ತಿ ವಿತರಣೆ

Rashmi Kasaragodu
Updated On : 8 Sept 2013, 11:16 am

ಕೋಲಾರ: ಗಣೇಶ ಹಬ್ಬದ ಆಚರಣೆಗಾಗಿ ವಿವಿಧ ಸಂಘ-ಸಂಸ್ಥೆಗಳಿಗೆ 501 ಗಣೇಶ ವಿಗ್ರಹಗಳ ವಿತರಣೆ ಮಾಡಲಾಗಿದೆ ಎಂದು ಶಾಸಕ ವರ್ತೂರ್ ಪ್ರಕಾಶ್ ತಿಳಿಸಿದರು. ಬೈರೇಗೌಡ ನಗರದ ತಮ್ಮ ನಿವಾಸದಲ್ಲಿ ಭಾನುವಾರ ಗಣೇಶ ಮೂರ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಕ್ಕೆ 300 ಮತ್ತು ಕೋಲಾರ ನಗರಕ್ಕೆ 201 ಮೂರ್ತಿಗಳನ್ನು ವಿತರಣೆ ಮಾಡಲಾಗಿದ್ದು, ಬೇಡಿಕೆ ಬಂದಲ್ಲಿ ಮತ್ತಷ್ಟು ವಿಗ್ರಹಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಮಳೆಯ ಕೊರತೆಯನ್ನು ಎದುರಿಸುವಂತಾಗಿದೆ. ಗಣೇಶ ಹಬ್ಬವನ್ನು ಜನತೆ ಶ್ರದ್ಧಾ, ಭಕ್ತಿಗಳಿಂದ ಆಚರಿಸಿ ಮಳೆಗಾಗಿ ಪ್ರತಿಯೊಬ್ಬರು ವಿಶೇಷ ಪೂಜೆ ಸಲ್ಲಿಸುವಂತೆ ಮನವಿ ಮಾಡಿದರು. ಗಣಪತಿಯ ಅನುಗ್ರಹದಿಂದ ಜಿಲ್ಲೆಗೆ ಮಳೆ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಶಾಸಕರು, ಮಳೆಗಾಗಿ ನಾನು ಸಹ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ರಘುರಾಂ, ತಾಪಂ ಉಪಾಧ್ಯಕ್ಷೆ ಸರಸ್ವತಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಛತ್ರಕೋಡಿಹಳ್ಳಿ ರಾಜಗೋಪಾಲ್, ವಕ್ಕಲೇರಿ ರಾಜಪ್ಪ, ಮಂಜುನಾಥ್, ಅಪ್ಪಿ, ಪ್ರಸಾದ್, ಕುಮಾರ್, ಡೆಕೋರೇಷನ್ ಕೃಷ್ಣ, ಅಮ್ಮೇರಹಳ್ಳಿ ಚಲಪತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement