ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರಿನ ಸಮಸ್ಯೆ ನಿವಾರಣೆಗೆ ಯತ್ನ: ಜಗದೀಶ್

Rashmi Kasaragodu
Updated On : 8 Sept 2013, 11:18 am

ಕನ್ನಡಪ್ರಭ ವಾರ್ತೆ, ಕೋಲಾರ, ಸೆ.8
ನಗರದ ಜನತೆಯನ್ನು ಕಾಡುತ್ತಿರುವ ಪ್ರಮುಖವಾದ ನೀರಿನ ಸಮಸ್ಯೆ ನಿವಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೋಲಾರ ನಗರಸಭೆಯ ನೂತನ ಆಯುಕ್ತ ಕೆ.ಎನ್. ಜಗದೀಶ್ ಭರವಸೆ ನೀಡಿದರು.
ನಗರಸಭೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೋಲಾರ ನಗರದವನೇ ಆಗಿರುವುದರಿಂದ ಇಲ್ಲಿನ ಸಮಸ್ಯೆ ಏನೆಂಬುದು ಅರ್ಥವಾಗಿದೆ. ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಮೊದಲ ಇದರ ನಿವಾರಣೆಗೆ ಹೆಚ್ಚಿನ ಗಮನ ನೀಡುತ್ತೇನೆ. ಅದೇ ರೀತಿ ಸ್ವಚ್ಛತೆ, ರಸ್ತೆ ಹಾಗೂ ಬೀದಿ ದೀಪಗಳ ಅಭಿವೃದ್ಧಿಗೆ ಗಮನ ಹರಿಸುತ್ತೇನೆಂದು ತಿಳಿಸಿದರು.
ನಗರಸಭೆಯ ಮೂಲಕ ಜನತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಹಣದ ಅವಶ್ಯಕತೆಯಿದೆ, ಸಾರ್ವಜನಿಕರು ತೆರಿಗೆಯನ್ನು ಸಕಾಲಕ್ಕೆ ಪಾವತಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕೆಂದರು.
ಟ್ಯಾಂಕರ್ಗಳ ಮೂಲಕ ಸರಬರಾಜು ಮಾಡುತ್ತಿರುವ ನೀರು ಮನೆಗಳಿಗೆ ತಲುಪುತ್ತಿಲ್ಲವೆಂಬ ದೂರುಗಳು ಕೇಳಿ ಬಂದಿರುವುದರಿಂದ ಇನ್ನು ಮುಂದೆ ನಗರದ ಕೆಲಸ ಕಡೆ ದೊಡ್ಡ ದೊಡ್ಡ ನೀರಿನ ಸಂಪುಗಳನ್ನು ನಿರ್ಮಿಸಿ, ಟ್ಯಾಂಕರ್ ನೀರನ್ನು ಸಂಪುಗಳಿಗೆ ತುಂಬಿಸಿ ನಂತರ ಓವರ್ಹೆಡ್ ಟ್ಯಾಂಕುಗಳ ಮೂಲಕ ನೀರನ್ನು ಸಾರ್ವಜನಿಕ ನಲ್ಲಿ ಮತ್ತು ಮನೆಗಳಿಗೆ ಹರಿಸಲು ಚಿಂತನೆ ನಡೆದಿದೆ ಎಂದರು.
ನಗರದಲ್ಲಿ ಕೆಲವು ಕಡೆ ಅಕ್ರಮವಾಗಿ ಕಟ್ಟಗಳ ನಿರ್ಮಾಣವಾಗಿದೆ, ಅದನ್ನು ತೆರವು ಮಾಡಲು ಈ ಹಿಂದಿನ ಆಯುಕ್ತರ ಪ್ರಯತ್ನಿಸಿದ್ದರಾದರೂ ಅವರ ಅಮಾನತಿನಿಂದ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಪತ್ರಕರ್ತರು ತಿಳಿಸಿದಾಗ, ನಾನೀನು ಅದಿಕಾರ ಸ್ವೀಕರಿಸಿ 24 ಗಂಟೆಗಳಾಗಿದೆ, ಹಬ್ಬ ಇರುವುದರಿಂದ ಅಕ್ರಮ ಕಟ್ಟಡಗಳ ನೆಲಸಮಕ್ಕೆ ಇದು ಸಕಾಲವಲ್ಲ, ಹಬ್ಬದ ಮುಗಿದ ಬಳಿಕ ಸಂಬಂಧಪಟ್ಟ ಪ್ರಕರಣಗಳ ಕಡತಗಳನ್ನು ಗಮನಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಿದರು.
ನಗರಸಭೆಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಕಡತಗಳು ಮಂಗಮಾಯವಾಗುತ್ತಿವೆ, ಕಚೇರಿಯ ವ್ಯವಸ್ಥೆ ಸುಧಾರಿಸಬೇಕಾಗಿದೆ.
 ಆಡಳಿತ ಸುಸ್ಥಿತಿಗೆ ತರಲು ಮೊದಲು ಗಮನ ನೀಡಿ ಎಂದು ಸುದ್ಧಿಗಾರರು ನೀಡಿದ ಸಲಹೆಗೆ ಸಕರಾತ್ಮಕವಾಗಿ ಸ್ಪಂದಿಸಿದ ಆಯುಕ್ತ ಕೆ.ಎನ್. ಜಗದೀಶ್, ಇನ್ನುಮುಂದೆ ಯಾವುದೇ ಕಡತಗಳು ನಾಪತ್ತೆ ಆಗದಂತೆ ಎಚ್ಚರ ವಹಿಸುತ್ತೇನೆ, ಅದಕ್ಕಾಗಿ ಪ್ರತ್ಯೇಕ ವಿಭಾಗ ತೆರೆದು ಅರ್ಜಿಗಳ ವಿಲೇವಾರಿ ವಿಳಂಬವಾಗದಂತೆ ನೋಡಿಕೊಳ್ಳುವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗರುಡಾಚಲ ಮೂರ್ತಿ, ಕಚೇರಿ ವ್ಯವಸ್ಥಾಪಕ ಶಿವಪ್ರಕಾಶ್, ಆರೋಗ್ಯ ನಿರೀಕ್ಷಕ ರಮೇಶ್, ಜೆಇ ಶ್ರೀನಿವಾಸ್, ನಟರಾಜ್ ಹಾಗೂ ನಗರಸಭೆ ಸದಸ್ಯ ಮುರಳಿಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement