ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೂಲ ಸೌಕರ್ಯ ಕಲ್ಪಿಸಲು ಮನವಿ

Rashmi Kasaragodu
Updated On : 8 Sept 2013, 11:19 am

ಕ.ಪ್ರ.ವಾರ್ತೆ   ತುಮಕೂರು   ಸೆ. 8
ಇಲ್ಲಿನ ಎಂಪ್ರೆಸ್ ಬಾಲಕಿಯರ  ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು  ನೀಡಬೇಕೆಂದು ಒತ್ತಾಯಿಸಿ ಆವಿಷ್ಕಾರದ ರಾಜ್ಯ ಸಮಿತಿಯ ಸದಸ್ಯ ಕಾಮ್ರೇಡ್ ಎಸ್.ಎನ್. ಸ್ವಾಮಿಯವರ ನೇತೃತ್ವದಲ್ಲಿ ಎಂ.ವಿ.ಕಲ್ಯಾಣಿ, ಮಾದಪ್ಪ ಎಸ್.ಕೆ, ರಾಜೇಶ್ವರಿ ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ನಿಯೋಗವೊಂದು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಸ್ಥಾನಿಕ ಸಹಾಯಕರನ್ನು ಭೇಟಿ ಮಾಡಿ ಮನವಿಪತ್ರವನ್ನು ಸಲ್ಲಿಸಿತು.
ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಅವರು ಆವರಣದ ಸ್ವಚ್ಛತೆ, ಕೊಠಡಿಗಳ ರಿಪೇರಿ ಮತ್ತು ಶೌಚಾಲಯಗಳ ಸಮಸ್ಯೆಗಳನ್ನು ಬಗೆಹರಿಸಲು ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು. ಅದಕ್ಕೂ ಮುಂಚೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ತುಮಕೂರು ಜಿಲ್ಲಾ ಘಟಕಗಳು ನಗರದ ಪ್ರತಿಭಟನೆ ನಡೆಸಿದವು. ಟೌನ್ಹಾಲ್ನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಘೋಷಣೆಗಳನ್ನು ಕೂಗಿದರು.
ಎಐಎಂಎಸ್ಎಸ್ನ ಜಿಲ್ಲಾ ಸಂಘಟನಾಕಾರರಾದ  ಕಾಮ್ರೇಡ್ ಎಂ.ವಿ.ಕಲ್ಯಾಣಿ ಮಾತನಾಡಿ, ಎಂಪ್ರೆಸ್  ಕಾಲೇಜಿನಲ್ಲಿ ಪ್ರಯೋಗಾಲಯ, ಗ್ರಂಥಾಲಯಗಳು ಐಷಾರಾಮದ ಸಂಗತಿಗಳೇನೋ ಎನ್ನುವಂತಿವೆ. ಕಾಲೇಜು ಆವರಣವೂ ಬಹಳ ಗಲೀಜಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯು ಡೆಂಘೀ ಮತ್ತು ಸೊಳ್ಳೆಯಿಂದ ಹರಡುವ ರೋಗಗಳಿಗೆ ತವರುಮನೆಯಾಗಿದೆ. ಆವರಣದ ಗಲೀಜು, ಕೆಸರು ಅಲ್ಲಿನ ವಿದ್ಯಾರ್ಥಿನಿಯರಿಗೆ ಯಾವ ರೋಗವನ್ನಾದರೂ ತರಬಹುದು. ಇದೆಲ್ಲಕ್ಕಿಂತಲೂ ಮಿಗಿಲಾಗಿ ಕೊಠಡಿಗಳು ಶಿಥಿಲಾವಸ್ಥೆಯನ್ನು ತಲುಪಿವೆ. ಜೋರಾಗಿ ಮಳೆ ಬಂದರೆ ಕಟ್ಟಡ ಕುಸಿದು ವಿದ್ಯಾರ್ಥಿಗಳ ಪ್ರಾಣಕ್ಕೆ ಸಂಚಕಾರ ತಂದರೂ ಆಶ್ಚರ್ಯವಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement