ಸ್ಥಳೀಯ ಆಹಾರ ಸೇವನೆ ಪೌಷ್ಟಿಕಾಂಶ
ತಿಪಟೂರು: ಗ್ರಾಮೀಣ ಜನರು ತಾವು ಬೆಳೆಯುವ ಆಹಾರ ಧಾನ್ಯಗಳಲ್ಲಿ ಹೇರಳವಾಗಿ ಪೋಷಕಾಂಶಗಳನ್ನು ಒಳಗೊಂಡಿದ್ದು, ನಿಗದಿತವಾಗಿ ಇವುಗಳ ಸೇವನೆ ಮಾಡುವುದರಿಂದ ಆರೋಗ್ಯವಂತ ಜೀವನ ನಡೆಸಬಹುದೆಂದು ಜಿಲ್ಲಾ ಪಂಚಾಯತಿ ಸದಸ್ಯ ಆನಂದರವಿ ತಿಳಿಸಿದರು. ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಹಿಂಡಿಸ್ಕೆರೆ ಗ್ರಾಮದಲ್ಲಿ ನಡೆದ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಕೀಲರ ಸಂಘ, ಆರೋಗ್ಯ ಇಲಾಖೆ ಮತ್ತಿತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಕುರಿತ ಜಾಗೃತಿ ಶಿಬಿರ ಹಾಗೂ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಎರಡು ಕಡೆ ಅಪಘಾತ
ಚಿಕ್ಕನಾಯಕನಹಳ್ಳಿ: ಹಬ್ಬದ ದಿನ ತಾಲೂಕಿನ ಎರಡು ಕಡೆ ಅಪಘಾತ ಸಂಭವಿಸಿದ್ದು ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನ ಹಂದನಕೆರೆ ಠಾಣಾವ್ಯಾಪ್ತಿಯಲ್ಲಿ ಮತಿಗಟ್ಟ ಸಮೀಪ ಮಲ್ಲೇನಹಳ್ಳಿ ತಾಂಡ್ಯದ ಮಗುವೊಂದು ಅಪಘಾತಕ್ಕೀಡಾಗಿ ಚಿಕಿತ್ಸೆಗಾಗಿ ತಿಪಟೂರಿನ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿದು ಬಂದಿದೆ. ಚಿ.ನಾ.ಹಳ್ಳಿ ಠಾಣಾವ್ಯಾಪ್ತಿಯ ಸಾಲ್ಕಟ್ಟೆ ಕ್ರಾಸ್ ಬಳಿ ನಾಲ್ವರು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ರಸ್ತೆ ಉಬ್ಬು ಹತ್ತಿರ ದ್ವಿಚಕ್ರ ಸವಾರ ಬ್ರೇಕ್ ಹಾಕಲಾಗಿ ಬೈಕಿಗೆ ಲಾರಿ ಹಿಂದಿನಿಂದ ಗುದ್ದಿದೆ. ನಾಲ್ವರು ಸವಾರರಿಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ ಪರಿಣಾಮ ಹಿಂಬದಿಯಲ್ಲಿದ್ದ ಇಬ್ಬರು ಸವಾರರು ನೆಗೆದು ಅಪಾಯದಿಂದ ಪಾರಾಗಿದ್ದಾರೆ.ದ್ವಿಚಕ್ರವಾಹನದಲ್ಲಿ ಕುಳಿತಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದು, ಒಬ್ಬನಿಗೆ ಕಾಲು ತುಂಡಾಗಿದ್ದು, ಮತ್ತೊಬ್ಬನಿಗೆ ಕಿಬ್ಬೊಟ್ಟೆ ಭಾಗದ ಮಾಂಸಖಂಡವೆಲ್ಲಾ ಹೊರಗೆ ಬಂದಿದೆ. ತುಮಕೂರಿಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಬೇಡಿಕೆ ಈಡೇರಿಕೆಗೆ ಶಾಸಕ ಆಗ್ರಹ
ಮಧುಗಿರಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರ ಬೇಡಿಕೆ ಈಡೇರಿಸುಂತೆ ಆಗ್ರಹಿಸಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಮನವಿ ಅರ್ಪಿಸಿದರು. ಈಗ್ಗೆ 12 ವರ್ಷ ಅನೇಕ ಶಿಕ್ಷಕರು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದು ನಮಗೆ ಸೇವಾ ಭದ್ರತೆ ಇಲ್ಲದೆ ಪರದಾಡುತ್ತಿದ್ದೇವೆ. ಹಾಗಾಗಿ ಸರ್ಕಾರ ಇತ್ತ ಗಮನ ಹರಿಸಿ ನಮ್ಮ ಸೇವೆ ಪರಿಗಣಿಸಿ ನಮ್ಮನ್ನು ಕಾಯಂ ಗೊಳಿಸಬೇಕು. ಸೇವಾ ಭದ್ರತೆ ನೀಡಬೇಕು. ಯುಜಿಸಿ ನಿಯಮಾನುಸಾರ ಮಾಸಿಕ 25 ಸಾವಿರ ರು.ವೇತನ ನಿಗದಿ ಪಡಿಸಬೇಕು. ವರ್ಷದ 12 ತಿಂಗಳು ಮೊದಲ ವಾರದಲ್ಲೇ ವೇತನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಶಾಸಕ ರಾಜಣ್ಣನವರಿಗೆ ಮನವಿ ನೀಡಿದರು. ಸಿ.ಕುಮಾರ, ಶಿವಕುಮಾರ,ನರೇಶ, ಮಂಜುನಾಥ, ಮಾರುತಿ ಮೊದಲಾದವರು ಉಪಸ್ಥಿತರಿದ್ದರು.
'ಗೀತೋಪದೇಶ ಅನಿವಾರ್ಯ'
ಚಿಕ್ಕನಾಯಕನಹಳ್ಳಿ: ಶ್ರೀಕೃಷ್ಣ ಭೇದಿಸಿದ ಗೀತೋಪದೇಶವು ಸಮಾಜದಲ್ಲಿ ಉತ್ತಮ ಬದುಕಿನ ದಾರಿಯನ್ನು ರೂಪಿಸುವ ಜ್ಞಾನವಂತಿಕೆ ಹಾಗೂ ರಾಜತಾಂತ್ರಿಕ ತಿರುಳಿನ ಧರ್ಮ ದರ್ಶನವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ತಿಳಿಸಿದರು. ಅವರು ಇಲ್ಲಿನ ರೋಟರಿ ಬಾಲಭವನದಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಶ್ರೀಕೃಷ್ಣವೇಷ-ಭೂಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಶ್ರೀಕೃಷ್ಣ ತನ್ನ ಬದುಕಿನಲ್ಲಿ ಜನಸಾಮಾನ್ಯರ ಒಡನಾಡಿಯಾಗಿದ್ದು ತನ್ನ ತುಂಟಾಗಳಿಂದ ಅವರ ಮನಸೆಳೆದ ಚಾಣಾಕ್ಷ.ಈ ಮೂಲಕ ಜನರ ಕಷ್ಟಕೋಟಲೆಗಳನ್ನು ಅರಿತ,ಅವುಗಳಿಗೆ ತನ್ನ ಬಾಲ್ಯದಲ್ಲಿಯೇ ಪರಿಹಾರವನ್ನು ಸಹ ಕೊಟ್ಟ ನಿಪುಣ. ಇಂದು ಜಾತಿ, ಧರ್ಮ ಮೀರಿ ನಿಂತು ಅನ್ಯಧರ್ಮೀಯರು ಆತನ ವೇಷಭೂಷಣವ್ನನು ತೊಟ್ಟಿರುವುದು ಆತನ ಹಿರಿಮೆಯನ್ನು ತೋರಿಸುತ್ತದೆ. ಈ ಮೂಲಕ ಆತ ಸವಾಂರ್ತರಯಾಮಿಯಾಗಿದ್ದಾನೆ ಎಂದರು. ಮಕ್ಕಳ ಸಾಹಿತ್ಯಕ್ಕಾಗಿ ಶಿವರಾಮ ಕಾರಂತ ಪ್ರಶಸ್ತಿ ಪುರಸ್ಕೃತರಾದ ಎಂ.ವಿ. ನಾಗರಾಜರಾವ್ ಅವರನ್ನು ಸನ್ಮಾನಿಸಲಾಯಿತ