ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಬ್ಬದ ಪ್ರಯುಕ್ತ ಸಾಮಗ್ರಿಗಳ ಖರೀದಿಸಲು ಮುಗಿಬಿದ್ದ ಗ್ರಾಹಕರು

Rashmi Kasaragodu
Updated On : 8 Sept 2013, 11:16 am

ಕೆಜಿಎಫ್: ಗೌರಿ- ಗಣೇಶ ಹಬ್ಬದ ಪ್ರಯುಕ್ತ ಭಾನುವಾರ ಬೆಳಗ್ಗೆಯಿಂದಲೇ ಗಣೇಶ ಮೂರ್ತಿ ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿಸಲು ಕೆಜಿಎಫ್ನ ಎಂಜಿ ಮಾರುಕಟ್ಟೆ ಹಾಗೂ ನಗರದ ವಿವಿಧ ರಸ್ತೆಗಳಲ್ಲಿ ಜನಸಾಮಾನ್ಯರು ಮುಗಿಬಿದ್ದಿದ್ದರು.
ಕಳೆದ ಮೂರು ದಿನಗಳ ಹಿಂದೆಯೇ ಕೆಜಿಎಫ್ನ ಪ್ರಮುಖ ಸ್ಥಳಗಳಲ್ಲಿ ಗೌರಿ ಗಣೇಶನ ಮೂರ್ತಿಗಳ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಗಣೇಶ ಮೂರ್ತಿ ಕೊಂಡೊಯ್ಯಲು ವಿವಿಧ ಬಡಾವಣೆಗಳಿಂದ ನಾಗರಿಕರು ಕುಟುಂಬ ಸಮೇತ ಆಗಮಿಸಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.
ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ರೀತಿಯ ಹೂಗಳು, ತೆಂಗಿನ ಕಾಯಿ, ಬಾಳೆ ಗಿಡಗಳು, ಮಾವಿನ ಎಲೆಗಳು, ನೇರಳೆ ಹಣ್ಣು, ಬಿಲ್ವಪತ್ರೆ ಎಲೆ, ನಿಂಬೆ ಎಲೆ ಸೇರಿದಂತೆ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಜನಸಾಮಾನ್ಯರು ಮುಗಿಬಿದ್ದಿದ್ದು ವಿಷೇಷವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement