ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹ
ಚಿಂತಾಮಣಿ: ಗುತ್ತಿಗೆದಾರನ ನಿರ್ಲಕ್ಷ್ಯದಿಂದ ವಿದ್ಯುತ್ ಟ್ರಾನ್ಸ್ಫಾರ್ಮರ್ ಉರುಳಿ ಎಂದು ಆರೋಪಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕುರುಟಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಾಲೂಕಿನ ಹೊರವಲಯದ ಬೆಂಗಳೂರು-ಮದನಪಲ್ಲಿ ರಸ್ತೆಯ ಕುರುಟಹಳ್ಳಿ ಬೈಪಾಸ್ ರಸ್ತೆ ಬಳಿ ನೂತನವಾಗಿ ಕೇಶಿಪ್ ರಸ್ತೆ ಕಾಮಗಾರಿ ನಡೆಯುತ್ತಿರುವುದು ಸರಿಯಷ್ಟೆ.
ಆದರೆ, ರಸ್ತೆ ನಿರ್ಮಾಣ ಮಾಡುವಾಗ ರಸ್ತೆ ಬದಿ ಮಳೆ ನೀರು ಸರಾಗವಾಗಿ ಹರಿಯಲು ಕಾಮಗಾರಿ ನಡೆಸದೆ ಇರುವುದರಿಂದ ಕಳೆದ 2 ದಿನಗಳಿಂದ ಸುರಿದ ಮಳೆ ನೀರು ಟ್ರಾನ್ಸ್ಫಾರ್ಮರ್ ಬಳಿ ನಿಂತ ಪರಿಣಾಮ ಉರುಳಿ ಬಿದ್ದಿದೆ ಎಂದು ಆರೋಪಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್: ವಿದ್ಯುತ್ ವ್ಯವಸ್ಥೆ ಸ್ಥಗಿತ
ಮಾಲೂರು: ಪುರಸಭೆಯ ನಿರ್ಲಕ್ಷ್ಯದಿಂದ ಶಿಥಿಲವಾಗುತ್ತಿರುವ ಇಲ್ಲಿನ ಐಡಿ ಸಮಿತಿ ಸಂಕೀರ್ಣದಲ್ಲಿ ಮಳೆ ನೀರು ಸೋರಿ ಶಾರ್ಟ್ ಸರ್ಕ್ಯೂಟ್ನಿಂದ ಸಂಕೀರ್ಣದ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ಪುರಸಭೆ ಮೀಟರ್ ರೂಮ್ನಲ್ಲಿ ಸಣ್ಣ ಹಂತದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಸಾರ್ವಜನಿಕನೊಬ್ಬ ಬೆಸ್ಕಾಂಗೆ ನೀಡಿದ ಮಾಹಿತಿಯಿಂದ ಭಾರಿ ಅನಾಹುತ ತಪ್ಪಿದೆ.