ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಾನಪದ ಕಲೆ ಪುನರುತ್ಥಾನಕ್ಕೆ ಯುವಕರಿಗೆ ಕರೆ

Rashmi Kasaragodu
Updated On : 11 Sept 2013, 1:25 am

ಹೊಳೆನರಸೀಪುರ: ಮರೆಯಾಗುತ್ತಿರುವ ನಮ್ಮ ಜನಪದೀಯ ಕಲೆ ಮತ್ತು ಸಂಸ್ಕೃತಿಯನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಇಂದಿನ ಯುವ ಸಮುದಾಯ ಮುಂದಾಗುವಂತೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ  ರಾಮಚಂದ್ರ ಪುತ್ತೂರಾಯ ಕರೆ ನೀಡಿದರು.
ಪಟ್ಟಣದ ಸಿಂಗಮ್ಮದೇವರ ದೇವಸ್ಥಾನ ಬಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕ ಹಮ್ಮಿಕೊಂಡಿದ್ದ ಜಾನಪದ ಸಂಸ್ಕೃತಿ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ವೈ.ವಿ.ಚಂದ್ರಶೇಖರ್ ಹಾಗೂ ಪರಿಷತ್ತಿನ ಅಧ್ಯಕ್ಷ ಬಾ.ರಾ.ಸುಬ್ಬರಾಯ ಮಾತನಾಡಿದರು.
ಕುಮಾರ್  ಛಲವಾದಿ, ವೀರಬಸಪ್ಪ, ಸತ್ಯನಾರಾಯಣ ಬಾಪು ಏಕಪಾತ್ರಾಭಿನಯ ನೀಡಿ ಮಕ್ಕಳನ್ನು ರಂಜಿಸಿದರು. ಸಂಗೀತ ಶಿಕ್ಷಕ ರಾಜೇಶ್ರಾವ್  ಜಾನಪದ ಗೀತೆಗಳನ್ನು ಹಾಡಿದರು.  
 ಗಾಯನ ಸ್ಪರ್ಧೆಯಲ್ಲಿ ರೇಖಾ-ಪ್ರಥಮ, ಸತ್ಯನಾರಾಯಣ್ - ದ್ವಿತೀಯ ಹಾಗೂ ಕುಮಾರ್ - ತೃತೀಯ ಬಹುಮಾನ ಗಳಿಸಿದರು. ಮುಖ್ಯ ಶಿಕ್ಷಕಿ ಎ.ಎನ್.ಪ್ರಸವಿ ಅಧ್ಯಕ್ಷತೆ ವಹಿಸಿದ್ದರು. ವಸತಿ ಶಾಲೆಯ ಮೇಲ್ವಿಚಾರಕ ಸಿದ್ದನಂಜಪ್ಪ, ಪರಿಷತ್ತಿನ ಕಾರ್ಯದರ್ಶಿ ಎಚ್.ಎನ್.ಕೃಷ್ಣ, ಖಜಾಂಚಿ ಜಿ.ಪಿ.ಮಂಜುನಾಥಗುಪ್ತ ಇದ್ದರು. ಪೂಜಾಶ್ರೀ ಪ್ರಾರ್ಥನೆ ಟಿ.ಕೆ.ರೇಖಾ ನಿರೂಪಿಸಿದರು. ಸಂಗೀತ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement