ಜೆಡಿಎಸ್ ಬೆಂಬಲಿತರಿಗೆ ಗೆಲವು
ಕನ್ನಡಪ್ರಭ ವಾರ್ತೆ, ಚಿಂತಾಮಣಿ, ಸೆ.10
ನಂದಿನಿ ಹಾಲು ಉತ್ಪಾದಕರ ಪತ್ತಿನ ಸಹಕಾರ ಸಂಘ ನಿಯಮಿತ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಗೆಲವು ಸಾಧಿಸಿದ್ದಾರೆ.
ಪಟ್ಟಣದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಭಾನುವಾರ ನಡೆದ ನಂದಿನಿ ಹಾಲು ಉತ್ಪಾದಕರ ಪತ್ತಿನ ಸಹಕಾರ ಸಂಘಕ್ಕೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ 13 ಸದಸ್ಯರ ಪೈಕಿ ಎಲ್ಲಾ ಸದಸ್ಯರು ಜೆಡಿಎಸ್ ಬೆಂಬಲಿತ ಸದಸ್ಯರೆ ಆಗಿದ್ದು, ಆಡಳಿತ ಚುಕ್ಕಾಣಿ ಜೆಡಿಎಸ್ ಬೆಂಬಲಿತರ ಕೈವಶವಾಗಿದೆ. ಸಾಮಾನ್ಯ ಸ್ಥಾನದ 9 ಅಭ್ಯರ್ಥಿಗಳಾದ ಟಿ.ಎಂ. ರಾಮಚಂದ್ರ- 441, ಚಂದ್ರಶೇಖರ್ರೆಡ್ಡಿ- 435, ಟಿ.ಎನ್. ರಾಜಗೋಪಾಲ್- 427, ಬಿ. ಶ್ರೀನಾಥ್- 410, ಎನ್. ನರಸಿಂಹಮೂರ್ತಿ- 398, ಸತ್ಯಪ್ರಕಾಶ್- 394, ಡಿ.ವಿ. ಗೋಪಾಲಕೃಷ್ಣ- 391, ಪಿ.ಜೆ. ಚಂದ್ರಶೇಖರ್ರೆಡ್ಡಿ- 391, ಎನ್. ಜಯರಾಮರೆಡ್ಡಿ- 385, ಟಿ.ನಾರಾಯಣಸ್ವಾಮಿ- 425, ಹಿಂದುಳಿದ ವರ್ಗದ ಮಹಿಳಾ ಮೀಸಲು ಅಭ್ಯರ್ಥಿಗಳಾದ ಮೀನಾಕ್ಷಮ್ಮ- 443, ಸರೋಜಮ್ಮ- 416, ಪರಿಶಿಷ್ಟ ವರ್ಗದ ಮೀಸಲು ಸ್ಥಾನಕ್ಕೆ ಅವಿರೋಧವಾಗಿ ನರಸಿಂಹಯ್ಯ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಉಷಾ ಬಾಯಿ ತಿಳಿಸಿದ್ದಾರೆ.
ವಿಜಯೋತ್ಸವ: ಜೆಡಿಎಸ್ ಬೆಂಬಲಿತ 13 ಸದಸ್ಯರು ಗೆಲ್ಲುತ್ತಿದ್ದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಪಟಾಕಿ ಸಿಡಿಸಿ ಎಲ್ಲಾ ಸದಸ್ಯರನ್ನು ಹೂ ಮಾಲೆ ಹಾಕಿ ಜಯಕಾರಗಳನ್ನು ಕೂಗುತ್ತಾ ವಿಜಯೋತ್ಸವ ಆಚರಿಸಿದರು. ಟಿ.ಎನ್. ರಾಜಗೋಪಾಲ್, ಕೈವಾರ ಸುಬ್ಬಾರೆಡ್ಡಿ, ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಬೂರಗಮಾಕಲಹಳ್ಳಿ ಕೆಂಪರೆಡ್ಡಿ, ಮಸಿಲಹಳ್ಳಿ ಮಂಜುನಾಥ್, ದೊಡ್ಡಹಳ್ಳಿ ಗೋಪಾಲಕೃಷ್ಣ ಇತರರು ಇದ್ದರು.