ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪರಮಶಿವಯ್ಯ ವರದಿ ಜಾರಿಗೆ ಮೊಯ್ಲಿಗೆ ಆಸಕ್ತಿ ಇಲ್ಲ: ಶ್ರೀರಾಮರೆಡ್ಡಿ

Rashmi Kasaragodu
Updated On : 11 Sept 2013, 1:22 am

ಗೌರಿಬಿದನೂರು: ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆ ಡಾ. ಪರಮಶಿವಯ್ಯ ವರದಿ ಜಾರಿಗೆ ತರಲು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಯಾವುದೇ ಆಸಕ್ತಿ ಇಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ, ಜಿ.ವಿ. ಶ್ರೀರಾಮರೆಡ್ಡಿ ಆರೋಪಿಸಿದರು.
ಪಟ್ಟಣದಲ್ಲಿ  ಶಾಶ್ವತ ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿ, ಕಳೆದ ಬಜೆಟ್ನಲ್ಲಿ 1800ಕೋಟಿ ಹಣ ಎತ್ತಿನ ಹೊಳೆ ಯೋಜನೆಗೆ ಮೀಸಲಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಇದುವರೆವಿಗೂ ಪರಮಶಿವಯ್ಯ ವರದಿ ಬಗ್ಗೆ ಡಿಪಿಆರ್ ಆಗಿಲ್ಲ. ಕೇವಲ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎತ್ತಿನಹೊಳೆ ಯೋಜನೆ ಜಾರಿ ಬಗ್ಗೆ ಮಾತನಾಡುತ್ತಿದ್ದಾರೆ. ಇದರಿಂದ ಕುಡಿಯಲು ನೀರು ಸಿಗುವುದಿಲ್ಲ ಜನರು ತಮ್ತಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಮನೆಗೊಬ್ಬರಂತೆ ಶಾಶ್ವತ ನೀರಾವರಿಗಾಗಿ ಹೋರಾಟಕ್ಕೆ ದುಮುಕುವುದು ಅನಿವಾರ್ಯ ಎಂದರು.
 ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳೂ ಸೇರಿದಂತೆ ಬಯಲು ಸೀಮೆಯ 8ಜಿಲ್ಲೆಗಳು ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದೆ.
ಕೊಳವೆ ಬಾವಿಗಳು ಸಂಪೂರ್ಣ ಬತ್ತಿಹೋಗಿದ್ದು ಕೆಲವೇ ದಿನಗಳಲ್ಲಿ ನಮ್ಮ ಜಿಲ್ಲೆಗಳು ಬರಡು ಭೂಮಿಯಾಗಲಿದೆ ಜನ ಮತ್ತು ಜಾನುವಾರುಗಳು ಉಳಿಯಬೇಕಾದರೆ ಜಿ.ಎಸ್. ಪರಮಶಿವಯ್ಯ ಅವರ ವರದಿಯಂತೆ  ಬಯಲು ಸೀಮೆ ಜಿಲ್ಲೆಗಳಿಗೆ 240ಟಿಎಂಸಿ ನೀರು ಹರಿಸುವಂತಹ ಶಾಶ್ವತ ನೀರಾವರಿ ಜಾರಿಯಾಗಲೇಬೇಕಿದೆ ಎಂದರು.
ಪರಿಸರವಾದಿ ಚೌಡಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನಿವೆಂಕಟಪ್ಪ ಮಾತನಾಡಿದರು. ಪ್ರಾಂತ ರೈತಸಂಘದ ತಾಲೂಕು ಕಾರ್ಯದರ್ಶಿ ಎನ್.ಆರ್. ರವಿಚಂದ್ರಾರೆಡ್ಡಿ, ತಾಲೂಕು ಕೃಷಿ ಕೂಲಿಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಸಿ. ಅಶ್ವತ್ಥಪ್ಪ, ಚನ್ನರಾಯಪ್ಪ. ಆನೂಡಿನಾಗರಾಜ್, ಅನ್ವರ್ಬಾಷಾ, ಚಿಕ್ಕಕುರುಗೋಡು ರಾಮಕೃಷ್ಣಾರೆಡ್ಡಿ, ಮುನಿವೆಂಕಟಪ್ಪ, ಎಸ್.ಎಸ್.ರೆಡ್ಡಿ, ಹಿಂದೂಪುರ ರೈತ ಮುಖಂಡ ವೆಂಕಟರಾಮರೆಡ್ಡಿ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement