ಮೈಸೂರು ಪಾಲಿಕೆ ಮೇಯರ್, ಉಪಮೇಯರ್ ಹಾಸನ ಭೇಟಿ
ಕ.ಪ್ರ. ವಾರ್ತೆ ಹಾಸನ ಸೆ.10
ಮೈಸೂರು ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಜೆಡಿಎಸ್ನ ಮೇಯರ್, ಉಪ ಮೇಯರ್ ಹಾಗೂ ಸದಸ್ಯರು ಮಂಗಳವಾರ ಹಾಸನಕ್ಕೆ ಆಗಮಿಸಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ರೇವಣ್ಣ ಅವರೊಂದಿಗೆ ಮಾತುತೆ ನಡೆಸಿದರು. ರೇವಣ್ಣ ಮಾತನಾಡಿ, ಪಾಲಿಕೆಯಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಪಕ್ಷ ಭೇದ ಮಾಡದೆ ನಗರದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸುವಂತೆ ಸಲಹೆ ನೀಡಿದರು.