ವಿನಾಯಕ ವಿಗ್ರಹ ಪ್ರತಿಷ್ಠಾಪನೆ
ಗುಡಿಬಂಡೆ: ಪಟ್ಟಣದ ಅರಳೆ ಪೇಟೆಯ ಹಾಲು ಡೈರಿ ಬಳಿ ವಿನಾಯಕ ಗೆಳೆಯರ ಬಳಗದ ವತಿಯಿಂದ 14 ನೇ ವರ್ಷದ ವಿನಾಯಕ ಸಪ್ತಾಹದ ಅಂಗವಾಗಿ ವಿನಾಯಕ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ಸತತವಾಗಿ 14 ವರ್ಷಗಳಿಂದ ಗಣೇಶ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ವರ್ಷವೂ ಸಹ ಬಿ ಬ್ಲಾಕ್ ಸಾರ್ವಜನಿಕರಿಗೆ ಮನರಂಜನೆಯನ್ನು ಉಣಬಯಿಸಲು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯೆಂದು ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.