ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಭ್ರಮದ ಗಣಪತಿ ಬ್ರಹ್ಮದೇವರ ರಥೋತ್ಸವ

Rashmi Kasaragodu
Updated On : 11 Sept 2013, 1:24 am

ಮುಳಬಾಗಲು: ತಾಲೂಕಿನ ಕುರುಡುಮಲೆ ಗ್ರಾಮದ ಪುರಾಣ ಪ್ರಸಿದ್ಧ ಗಣಪತಿ ದೇವರ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆಯಿಂದಲೇ ದೇವರಿಗೆ ಮಹಾಕುಂಭಾಭೀಷೆಕ, ಆರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿಸಿ ಶಿಲಾಗ್ರಾಮ ಮೂರ್ತಿಯನ್ನು ಬೆಳ್ಳಿ ವಜ್ರಾಂಗಿಯೊಂದಿಗೆ ಅಲಂಕರಿಸಲಾಗಿತ್ತು.  ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಕೊತ್ತೂರು ಮಂಜುನಾಥ್, ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಮುಂತಾದವರು ಭಾಗವಹಿಸಿದ್ದರು. ಸರಗಳ್ಳತನ ಪ್ರಕರಣಗಳು ಕಳೆದ ವರ್ಷ ಹೆಚ್ಚು ನಡೆದ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ಫ್ರಾನ್ಸಿಸ್, ಶಂಕರಪ್ಪ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.


27 ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದು ಭೇಟಿ
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸೆ.27 ರಂದು ಜಿಲ್ಲೆಗೆ ಆಗಮಿಸಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು. ಅವರು ಜಿಲ್ಲಾ ತರಬೇತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿ ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದರಿಂದ ಯಾವುದೇ ಲೋಪದೋಷಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು. ಮುಖ್ಯಮಂತ್ರಿಯವರು ಸೆ.27 ರಂದು ಬೆಳಿಗ್ಗೆ ಬೆಂಗಳೂರು 10.30ಕ್ಕೆ ಬಿಟ್ಟು 11.30ಕ್ಕೆ ನರಸಾಪುರಕ್ಕೆ ಆಗಮಿಸುವರು. ಅಲ್ಲಿ ಕೈಗಾರಿಕೆ ಉದ್ಘಾಟನೆ ಕಾರ್ಯಕ್ರಮ ಮುಗಿಸಿ, 12.30 ಕ್ಕೆ ಮೇಮಗಲ್ಗೆ ಆಗಮಿಸಿ ಕೈಗಾರಿಕಾ ವಲಯಕ್ಕೆ ಶಿಲಾನ್ಯಾಸ,  ಟಾಟಾ ಪವರ್ ಕಂಪನಿಗೆ ಶಂಕುಸ್ಥಾಪನೆ, ಕೈಗಾರಿಕಾ ಇಲಾಖೆ ಟೂಲ್ ರೂಂಗೆ ಶಂಕುಸ್ಥಾಪನೆ, ವೇಮಗಲ್ನಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ, ಪ್ರೌಢಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ, ವೇಮಗಲ್ನಲ್ಲಿ ಕ್ರೀಡಾಂಗಣ ಉದ್ಘಾಟನೆ,  ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಉದ್ಘಾಟನೆ,  ಗ್ರಾಮ ಪಂಚಾಯತಿ ಕಟ್ಟಡದ ಶುದ್ಧ ನೀರು ಪೂರೈಕೆ ಮತ್ತು ಶಂಕುಸ್ಥಾಪನೆ,  ಜಿಲ್ಲಾಡಳಿತ ಕಾಂಪ್ಲೆಕ್ಸ್ಕ್ಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸುವರು.ನಂತರ ಚೆನ್ನಯ್ಯ ರಂಗಮಂದಿರದಲ್ಲಿ ಸನ್ಮಾನ ಕಾರ್ಯಕ್ರಮ ಹಾಗೂ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ.
ಮಂಗಳವಾರವೂ ರಜೆ ಘೋಷಿಸಿದ ಶಿಕ್ಷಕರು!
ಶಿಡ್ಲಘಟ್ಟ: ಬಶೆಟ್ಟ ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮಲಿಂಗಾಪುರ ಸರ್ಕಾರಿ ಶಾಲೆಯ ಅಧ್ಯಾಪಕ ವರ್ಗದ ನಿರ್ಲಕ್ಷ್ಯದಿಂದ ಸರ್ಕಾರಿ ರಜೆಯಲ್ಲದಿದ್ದರೂ ಮಂಗಳವಾರ ಶಾಲೆಗೆ ರಜೆಯನ್ನು ಘೋಷಿಸಿರುವ ಘಟನೆ ನಡೆದಿದೆ. ರಾಮಲಿಂಗಾಪುರದ ಈ ಶಾಲೆ ಅವ್ಯವಸ್ಥೆಯ ತಾಣವಾಗಿದೆ. ಶಾಲೆಯಲ್ಲಿ ಅಧ್ಯಾಪಕ ವೃಂದ ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ, ಶಾಲೆಗೆ ಬಿಸಿಯೂಟದ ಸೌಲಭ್ಯವಿದ್ದರೂ ಬಿಸಿಯೂಟದ ವ್ಯವಸ್ಥೆ ಸರಿಯಾಗಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮಸ್ಥರು ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯವನ್ನು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.         ಹಿಂದುಳಿದ ಪ್ರದೇಶವಾದ ದಿಬ್ಬೂರಹಳ್ಳಿ ಬಾಗದಲ್ಲಿ ಬಹಳಷ್ಟು ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊರತೆಯಿಂದಾಗಿ ಆ ಬಾಗದ ಪ್ರಗತಿಗೆ ಮಾರಕವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement