ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರಿ ಸೌಲಭ್ಯಗಳನ್ನು ಅಲ್ಪ ಸಂಖ್ಯಾತರು ಸದ್ಬಳಕೆ ಮಾಡಿಕೊಳ್ಳಿ'

Rashmi Kasaragodu
Updated On : 11 Sept 2013, 1:23 am

ಗೌರಿಬಿದನೂರು: ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಅಲ್ಪ ಸಂಖ್ಯಾತರಾದ ಮುಸ್ಲಿಂ ಬಾಂಧವರು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿಶ್ರಾಂತ ಐಎಎಸ್ ಅಧಿಕಾರಿ ಸೈಯ್ಯದ್ ಜಮೀರ್ ಪಾಷಾ ತಿಳಿಸಿದರು.
ಅವರು ಭಾನುವಾರ ಸಂಜೆ ಅಲೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಸ್ಲಿಂ ವಿದ್ಯಾರ್ಥಿಗಳಿಗೆ ಓದಲು ಸರ್ಕಾರ ಶಿಷ್ಯ ವೇತನ, ಇತರ ಸೌಲಭ್ಯಗಳನ್ನು ಕಲ್ಪಿಸುತ್ತಿದೆ, ಸಮುದಾಯವು ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಿತನುಡಿಗಳನ್ನು ನುಡಿದರು.
ಕಳದ ವರ್ಷ ಕೇಂದ್ರ ಸರ್ಕಾರದಿಂದ ಅಲ್ಪ ಸಂಖ್ಯಾತ ಮುಸ್ಲಿಮರಿಗಾಗಿ ಮೀಸಲಿಟ್ಟ 100ಕೋಟಿ ಹಣದಲ್ಲಿ 90ಕೋಟಿ ಮಾತ್ರ ಖರ್ಚಾಗಿದೆ ಉಳಿದ ಹಣ ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ, ನಮಗಾಗಿ ಮೀಸಲಿಟ್ಟ ಹಣವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಮಕ್ಕಳಿಗೆ ವಿದ್ಯೆ ಕೊಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಲೀಪುರದ ಮೌಲಾನಾ ದಿಲ್ವಾರಾ ಹುಸೇನೀ ಇಮಾಮ್, ಕೆ.ಎಂ. ಮುಜಾಮಿಲ್,ಮೀರ್ ಅಬ್ಬಾಸ್ ಹುಸೇನಿ,ಮೌಲಾನಾ ಆದಿಲ್ ರಜಾ, ಮೌಲಾನಾ ಅಜಹರ್ ಹುಸೇನಿ, ಮೌಲಾನಾ ಜವಹರ್ ಹುಸೇನಿ ಮುಂತಾದವರು ಭಾಗವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement