ಅಕ್ರಮ ಮರಳು ಲಾರಿ ವಶ
ಮುಳಬಾಗಲು: ತಾಲೂಕಿನ ತಿಮ್ಮರಾಜಪಲ್ಲಿ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಗ್ರಾಮಸ್ಥರು ತಮ್ಮ ಗ್ರಾಮದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮರಳು ಲಾರಿಯನ್ನು ವಶಪಡಿಸಿಕೊಂಡು ಗಾಲಿಯ ಗಾಳಿ ಬಿಟ್ಟು ಪ್ರತಿಭಟಿಸಿದರು. ಗ್ರಾಮದ ಭೈರವಿ ನದಿಯ ದಡದಿಂದ ಮರಳು ಸಾಗಿಸುತ್ತಿದ್ದ ಲಾರಿ ವಶಪಡಿಸಿಕೊಂಡ ಗ್ರಾಮಸ್ಥರು, ಬಳಿಕ ವಿಷಯವನ್ನು ತಹಸೀಲ್ದಾರ್ ಗಮನಕ್ಕೆ ತಂದರು. ತಕ್ಷಣ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ಕಂದಾಯ ನಿರೀಕ್ಷಕ ಬಿ.ಆರ್. ರೆಡ್ಡೆಪ್ಪ ಗುಪ್ತ, ನರೇಶ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಲಾರಿ ವಶಪಡಿಸಿಕೊಂಡ ಕಾರಣ ಸಂಚಾರಕ್ಕೆ ಅಡಚಣೆಯಾಗಿದ್ದ ಇತರೆ ವಾಹನಗಳನ್ನು ತೆರವುಗೊಳಿಸಲಾಯಿತು. ಅಕ್ರಮ ಮರಳು ಲಾರಿಯನ್ನು ಹಿಡಿದುಕೊಟ್ಟ ಗ್ರಾಮಸ್ಥರನ್ನು ತಹಸೀಲ್ದಾರ್ ಅಭಿನಂದಿಸಿದರು.