ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅದ್ಧೂರಿಯಾಗಿ ಗಣೇಶ ವಿಸರ್ಜನಾ ಮೆರವಣಿಗೆ

Rashmi Kasaragodu
Updated On : 11 Sept 2013, 11:49 am

ಕ.ಪ್ರ.ವಾರ್ತೆ   ಕೋಲಾರ   ಸೆ. 11
ನಗರದಲ್ಲಿ ಬುಧವಾರ ಲೋಕ ಮಾನ್ಯ ತಿಲಕ್ ಗಣೇಶ ವಿಸರ್ಜನಾ ಸಮಿತಿಯಿಂದ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಕಳೆದ ಸಾರಿಗಿಂತ ಈ ಬಾರಿ ಕಡಿಮೆ ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಇದಕ್ಕೆ ಕಳೆದ ರಾತ್ರಿ ಸುರಿದ ಎಡೆ ಬಿಡದ ಜಡಿ ಮಳೆ ಕಾರಣವಾಗಿತ್ತು. ನಗರದ ಎಂ.ಜಿ.ರಸ್ತೆಯ ಗಾಂಧಿವನದಿಂದ ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ ಆರಂಭವಾಗಿ ರಾತ್ರಿ 9 ಗಂಟೆಗೆ ಕೋಲಾರಮ್ಮ ಕರೆಯಲ್ಲಿ ಅಂತ್ಯಗೊಂಡಿತು. ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಕೋಲಾರಮ್ಮ ಕೆರೆ ಅಂಗಳಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೊಂಡದಲ್ಲಿ ಕ್ರೈನ್ ಸಹಾಯದಿಂದ ವಿಸರ್ಜನೆ ಮಾಡಲಾಯಿತು.
ವಿವಿಧ ಗ್ರಾಮಗಳಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಕೇಸರಿ ಟೀ ಶರ್ಟ್ ಧರಿಸಿ ಕುಣಿದು ಕುಪ್ಪಳಿಸಿ ಮೆರವಣಿಗೆಗೆ ಕಳೆ ತುಂಬಿದರು. ವಿವಿಧ ಜನಪದ ಕಲಾ ತಂಡಗಳು ಜನರನ್ನು ರಂಜಿಸಿತು. ಗಾರುಡಿ ಗೊಂಬೆ, ತಮಟೆ ವಾದ್ಯ, ನಾದಸ್ವರ, ವೀರಗಾಸೆ ಮುಂತಾದ ಕಲಾ ತಂಡಗಳು ಆಕರ್ಷಣಿಯವಾಗಿತ್ತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಸಾಗಲು ಅವಕಾಶ ನಿಷೇಧಿಸಲಾಗಿತ್ತು.
ನಗರದ ಪ್ರಮುಖ ರಸ್ತೆಗಳಾದ ಎಂ.ಜಿ. ರಸ್ತೆ, ಅಮ್ಮವಾರಿ ಪೇಟೆ ವೃತ್ತ, ಶಾರದಾ ಚಿತ್ರ ಮಂದಿರ ರಸ್ತೆ, ಬಸ್ನಿಲ್ದಾಣ ವೃತ್ತ, ಕಾಳಮ್ಮ ಗುಡಿ ಬೀದಿಯಲ್ಲಿ ಮೆರವಣಿಗೆ ವೀಕ್ಷಿಸಲು ಸಾವಿರಾರು ಜನರು ರಸ್ತೆಯ ಇಕ್ಕಲೆಡೆಗಳಲ್ಲಿ ನಿಂತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement