ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಭಿವೃದ್ಧಿಗೆ ಸ್ವಯಂಸೇವಾ ಸಂಸ್ಥೆ ಪಾತ್ರ ಮುಖ್ಯ'

Rashmi Kasaragodu
Updated On : 11 Sept 2013, 11:42 am

ಕ.ಪ್ರ.ವಾರ್ತೆ   ಕೋಲಾರ   ಸೆ. 11
ಸ್ವಯಂ ಸೇವಾ ಸಂಸ್ಥೆಗಳು ಸಾರ್ಥಕವಾದ ಕೆಲಸ ಮಾಡಿದ್ದಲ್ಲಿ ಅಭಿವೃದ್ಧಿ ತಾನಾಗಿಯೇ ವೃದ್ಧಿಯಾಗುವುದೆಂದು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಜಯರಾಜ್ ತಿಳಿಸಿದರು.
ಅವರು ಮಂಗಳವಾರ ಕ್ಯಾಸಂಬಳ್ಳಿಯ ಶ್ರೀ ವಿನಾಯಕ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಒಂದು ಸಾವಿರ ಮಕ್ಕಳಿಗೆ ತಟ್ಟೆ, ಲೋಟ ಹಾಗೂ ನೋಟ ಪುಸ್ತಕ, ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ಈ ದೇಶದ ಆಧಾರ ಸ್ತಂಭಗಳಾಗಿದ್ದು ದೇವರ ಕಾರ್ಯದ ಜೊತೆಗೆ ದಾನಿಗಳನ್ನು ಹುಡುಕಿ ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಂತಹ ಕಾರ್ಯಗಳನ್ನು ಮಾಡುವುದು ಅಪರೂಪವಾಗಿದೆ ಎಂದರು.
ಕೆ.ವಿ. ವೆಂಕಟಕೃಷ್ಣಾರೆಡ್ಡಿ ಮಾತನಾಡಿ, ಗಡಿಭಾಗದಲ್ಲಿ ಅನಕ್ಷರಸ್ಥರು ಹೆಚ್ಚಾಗಿದ್ದು ಪೋಷಕ ಪ್ರತಿನಿಧಿಗಳಾದ ತಾವು ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಿ ಅವರ ಬದುಕು ಅಸನಾಗಿಸಲು ಅವಕಾಶ ನೀಡಬೇಕೆಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್. ಶ್ರೀನಿವಾಸನ್ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಗ್ರಾಮದಲ್ಲಿ ಎಲ್ಲರಲ್ಲೂ ಒಳ್ಳೆಯ ಸಾಮರಸ್ಯ ಮೂಡುವುದಲ್ಲದೆ ಯುವಕರಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದರು.
ತಾ.ಪಂ. ಸದಸ್ಯ ರಾಮಚಂದ್ರಾರೆಡ್ಡಿ, ಗ್ರಾ.ಪಂ. ಸದಸ್ಯ ರಘುರಾಮರೆಡ್ಡಿ, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರ ವೆಂಕಟರೆಡ್ಡಿ, ಕೆ.ಇ.ಬಿ. ಸಿದ್ಧಗೌಡ, ನಿವೃತ್ತ ಆರೋಗ್ಯಾಧಿಕಾರಿ ಶ್ರೀನಿವಾಸ್, ಮು.ಶಿ. ವೆಂಕಟಮುನಿಯಪ್ಪ, ರಾಮಾಂಜನಪ್ಪ, ಎಂ. ಶ್ರೀನಿವಾಸ್, ರಾಮಮೂರ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement