ಎಟಿಎಂ ಯಂತ್ರ ಕಳವು ಯತ್ನ
ಕೆಜಿಎಫ್: ಆಕ್ಸಿಸ್ ಬ್ಯಾಂಕ್ನ ಎಟಿಎಂ ಯಂತ್ರವನ್ನು ಕಳವು ಮಾಡಲು ಪ್ರಯತ್ನಿಸಿದ ಕಳ್ಳರು ಭದ್ರತಾ ಸಿಬ್ಬಂದಿ ಕಂಡು ಪರಾರಿಯಾಗಿರುವ ಘಟನೆ ಬೇತಮಂಗಲ ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೇತಮಂಗಲ ಹಾಗೂ ವಿ.ಕೋಟ ರಸ್ತೆಯ ನಾಯ್ಡು ಕಾಂಪ್ಲೆಕ್ಸ್ನಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಕಳೆದ ರಾತ್ರಿ ಕಳ್ಳರು ನುಗ್ಗಿದ್ದು ಹಣವನ್ನು ದೋಚಲು ಎಟಿಎಂ ಯಂತ್ರವನ್ನು ಜಖಂಗೊಳಿಸಿದ್ದು ಶಬ್ದಕೇಳಿ ಕೋಣೆಯಿಂದ ಬಂದ ಭದ್ರತಾ ಸಿಬ್ಬಂದಿಯನ್ನು ಕಂಡು ಕಳ್ಳರು ಪರಾರಿಯಾಗಿದ್ದಾರೆ ಎಂದು ಕೋಲಾರದ ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ಎಲ್.ಎನ್. ನರೇಶ್ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.