ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗಣೇಶೋತ್ಸವ ಪ್ರಯುಕ್ತ ಗಮನ ಸೆಳೆದ ಮಲ್ಲಕಂಬ

Rashmi Kasaragodu
Updated On : 11 Sept 2013, 11:41 am

ಮಾಲೂರು: ತಾಲೂಕಿನ ಲಿಂಗಾಪುರದಲ್ಲಿ ಗಣೇಶೋತ್ಸವದ ಅಂಗವಾಗಿ ವಿಶೇಷವಾಗಿ ಮಲ್ಲಕಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಗ್ರಾಮದ ಗಣೇಶ ಹಬ್ಬ ಆಚರಣೆ ಸಮಿತಿಯವರು ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ ಈ ಮಲ್ಲಕಂಬ ಸ್ಪರ್ಧೆಯಲ್ಲಿ ತಾಲೂಕಿನ ಚಿಕ್ಕಕಡತೂರು, ಮಲ್ಲಿಯಪ್ಪನಹಳ್ಳಿ, ಕಣವೇನಹಳ್ಳಿ, ಚವ್ವೇನಹಳ್ಳಿ ತಂಡಗಳು ಭಾಗವಹಿಸಿದ್ದವು. ಹುಂಗೇನಹಳ್ಳಿ ಪಂಚಾಯಿತಿ ಅಧ್ಯಕ್ಷ ಚಾನ್ ಪಾಷ, ಚಿಕ್ಕಕಡತೂರಿನ ಕೃಷ್ಣಪ್ಪ, ಓಬಲ ರೆಡ್ಡಿ, ಯಾಸಿನ್ ಸೇರಿದಂತೆ ಇತರೆ ಮುಖಂಡರು ಇದ್ದರು.


ಗದ್ದೆಕಣ್ಣೂರು ಗ್ರಾಮಾಭಿವೃದ್ಧಿಗೆ ಕ್ರಿಯಾ ಯೋಜನೆ: ವರ್ತೂರು

ಕೋಲಾರ: ತಾಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ 5 ಲಕ್ಷ ರು. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಶಾಸಕ ವರ್ತೂರು ಆರ್. ಪ್ರಕಾಶ್ ಬುಧವಾರ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಮುಂದಿನ ಅಭಿವೃದ್ಧಿ ಕಾರ್ಯಗಳಿಗಾಗಿ ಕ್ರಿಯಾ ಯೋಜನೆ ರೂಪಿಸಿದ್ದು ಹಂತ ಹಂತವಾಗಿ ಅನುಷ್ಠಾನಕ್ಕೆ ತರುವ ಮೂಲಕ ಗ್ರಾಮದಲ್ಲಿ ಯಾವುದೇ ಕೊರತೆ ಇಲ್ಲದಂತೆ ಆಸಕ್ತಿ ವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ಗ್ರಾಪಂ ಸದಸ್ಯ ಪ್ರಸನ್ನ, ನಾರಾಯಣಸ್ವಾಮಿ, ಮಂಜು, ಬಾಬು, ಪಾಪಣ್ಣ, ಸಿಂಗಣ್ಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement