ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರಿನ ಸಮಸ್ಯೆ ನಿವಾರಣೆ ಯತ್ನ: ನಗರಸಭೆ ನೂತನ ಆಯುಕ್ತರ ಭರವಸೆ

Rashmi Kasaragodu
Updated On : 11 Sept 2013, 11:49 am

ಕೋಲಾರ: ಜಡ್ಡುಗಟ್ಟಿರುವ ಆಡಳಿತಕ್ಕೆ ಚುರುಕು ಮುಟ್ಟಿಸಿ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ನಗರಸಭೆ ನೂತನ ಆಯುಕ್ತ ಜಗದೀಶ್ ಅವರಿಗೆ ಜಯನಗರ ನಿವಾಸಿಗಳ ಪರವಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಎನ್. ಕೃಷ್ಣಾರೆಡ್ಡಿ ಮನವಿ ಮಾಡಿದರು.
ಇಲ್ಲಿನ ಜಯನಗರ ನಾಗರಿಕರ ಪರವಾಗಿ ನೂತನ ಆಯುಕ್ತರನ್ನು ಸನ್ಮಾನಿಸಿ ಮಾತನಾಡಿದ ಅವರು, ನಗರದಲ್ಲಿ ಸಮಸ್ಯೆಗಳು ತೀವ್ರವಾಗಿದ್ದು, ಕುಡಿಯುವ ನೀರು, ಚರಂಡಿ, ಬೀದಿ ದೀಪ, ರಸ್ತೆ ಕಾಮಗಾರಿಗಳು ಶೀಘ್ರ ನಡೆಯಬೇಕಾಗಿದೆ ಮತ್ತು ಗುಣಮಟ್ಟ ಕಾಯ್ದುಕೊಳ್ಳಬೇಕು, ಈ ನಿಟ್ಟಿನಲ್ಲಿ ನೂತನ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಜಯನಗರ ಬಡಾವಣೆಯ ನಾಗರಿಕರು ಸಮರ್ಪಕವಾಗಿ ತೆರಿಗೆ ಪಾವತಿಸುವ ಮನೋಭಾವ  ಬೆಳೆಸಿಕೊಂಡು ಬಂದಿದ್ದರೂ, ಸೌಲಭ್ಯ ನೀಡಿಕೆಯಲ್ಲಿ ಈವರೆಗೂ ಅನ್ಯಾಯ ಮಾಡುತ್ತಲೇ ಬರಲಾಗಿದೆ ಎಂದ ಕೃಷ್ಣಾರೆಡ್ಡಿ, ಇದನ್ನು ನೂತನ ಆಯುಕ್ತರು ಸರಿಪಡಿಸಿ ಸೂಕ್ತ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಸಹಕರಿಸಬೇಕೆಂದರು.
ಸನ್ಮಾನ ಸ್ವೀಕರಿಸಿದ ನೂತನ ಆಯುಕ್ತ ಜಗದೀಶ್, ತಮ್ಮ ಶಕ್ತಿ ಮೀರಿ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿಯೂ, ನಾನು ಇದೇ ಬಡಾವಣೆಯ ಸ್ಥಳೀಯ ನಿವಾಸಿಯಾಗಿದ್ದು, ಸಮಸ್ಯೆಗಳ ಬಗ್ಗೆ ಅರಿವಿದೆ ಎಂದರು.
ಇದೇ ಸಂದರ್ಭದಲ್ಲಿ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸರ್ವಮಂಗಳಾ, ದ್ವಿತೀಯ ಬಹುಮಾನ ಗಳಿಸಿದ ಮಂಜುಳಾ, ತೃತೀಯ ಸ್ಥಾನ ಪಡೆದದ ಕೆ.ಎನ್. ಶೋಭಾರಿಗೆ ಬಹುಮಾನ ವಿತರಿಸಲಾಯಿತು. ಕೆನರಾಬ್ಯಾಂಕಿನ ಸಿಬ್ಬಂದಿ ಶಿವಶಂಕರ್, ರಾಮಮೂರ್ತಿ, ಬೆಮೆಲ್ ಮುತ್ತಪ್ಪ, ಶಿವಣ್ಣ, ಸುಬ್ಬರಾವ್, ಕೃಷ್ಣೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement