ಮಹಿಳಾ ಹಾಸ್ಟೆಲ್ ಅವ್ಯವಸ್ಥೆ: ವಾರ್ಡನ್ ಅಮಾನತಿಗೆ ಎಂಎಲ್ಸಿ ವೀರಯ್ಯ ಸೂಚನೆ
ಕೋಲಾರ: ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪಕ್ಕದಲ್ಲಿರುವ ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಯರ ಹಾಸ್ಟೆಲ್ ವಾರ್ಡನ್ ಅವರನ್ನು ಕೂಡಲೇ ಅಮಾನತುಪಡಿಸುವಂತೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯನವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ರಾತ್ರಿ ಹಾಸ್ಟೆಲ್ಗೆ ಅನಿರೀಕ್ಷಿತ ಭೇಟಿ ನೀಡಿದ್ದ ವೀರಯ್ಯನವರು ವಿದ್ಯಾರ್ಥಿಯರ ಕೊಂದು-ಕೊರತೆ ಅಲಿಸಿ, ವಾರ್ಡನ್ ಕರ್ತವ್ಯ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರಿಗೆ ನೀಡುವ ಕಳಪೆ ಆಹಾರ, ಅಶುದ್ಧವಾದ ನೀರು, ಮೂಲ ಸೌಕರ್ಯಗಳ ಕೊರತೆ ಕಂಡು ಕೆಂಡಾಮಂಡಲವಾದ ವೀರಯ್ಯನವರು ತಕ್ಷಣ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಮಹಿಳಾ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳನ್ನು ಪಶುಗಳಿಗಿಂತ ಕೀಳಾಗಿ ಕಾಣಲಾಗುತ್ತಿದೆ, ವಾರ್ಡನ್ ಪ್ರಮೀಳಮ್ಮ ಸರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ, ಕೂಡಲೇ ವಾರ್ಡನ್ನ್ನು ಅಮಾನತುಪಡಿಸಿ ದಕ್ಷರನ್ನು ನೇಮಕ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಎಸ್. ರಾಜೇಂದ್ರ, ಗಾಂಧಿನಗರ ವೆಂಕಟೇಶ್ ಮತ್ತಿತರರು ಇದ್ದರು.