ಮಾಲೂರಲ್ಲಿ ನಮ್ಮ ಓಟ ಭಾರತಕ್ಕಾಗಿ ಜಾಥಾ
ಕ.ಪ್ರ.ವಾರ್ತೆ ಮಾಲೂರು ಸೆ. 11
ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಸ್ಥಳೀಯ ವಿವೇಕಾನಂದ ಜನ್ಮದಿನಾಚರಣೆ ಸಮಿತಿಯು ಪಟ್ಟಣದಲ್ಲಿ 'ನಮ್ಮ ಓಟ ಭಾರತಕ್ಕಾಗಿ' ಜಾಥಾ ಆಯೋಜಿಸಲಾಗಿತ್ತು.
ಇಲ್ಲಿನ ಬಸ್ ನಿಲ್ದಾಣ ಬಳಿಯ ಉದ್ಯಾನವನದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದ ನಂತರ ಯುವ ವಿದ್ಯಾರ್ಥಿಗಳು ಪ್ರತಿಮೆ ಬಳಿಯಿಂದ ಮಾಸ್ತಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರವರೆಗೆ ಮ್ಯಾರಥಾನ್ ನಡೆಸಿದರು.
ಪಟ್ಟಣದ ತರಂಗ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ತಬಲ ಶ್ರೀನಿವಾಸ್, ದೇಶದ ಸಂಸ್ಕೃತಿಯ ಹಿರಿಮೆಯನ್ನು ಪ್ರಂಪಚವೇ ತಿರುಗಿ ನೋಡುವಂತಹ ಭಾಷಣವನ್ನು ಚಿಕಾಗೋನಲ್ಲಿ ಭಾಷಣ ಮಾಡಿದ ದಿನವಾಗಿದ್ದು, ಐರೋಪ್ಯ ದೇಶಗಳು ಭಾರತೀಯರ ಬಗ್ಗೆ ಕುತೂಹಲ ಮೂಡಿಸುವಂತಾಯಿತು. ಇಂದಿನ ದಿನದಂದು ಭಾರತಕ್ಕಾಗಿ ಓಟವನ್ನು ಹಮ್ಮಿಕೊಂಡು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಸೂರ್ಯ ನಾರಾಯಣರಾವ್ ಮಾತನಾಡಿ, ವಿವೇಕಾನಂದರ ಆದರ್ಶ ಇಂದಿಗೂ ಪ್ರಸ್ತುತವಾಗಿದ್ದು, ಯುವ ಜನತೆ ತಪ್ಪದೆ ಪಾಲಿಸಬೇಕು ಎಂದರು.
ಸಮಿತಿಯ ಗೋವಿಂದರಾಜು, ಶಂಕರ್, ಧರ್ಮಣ್ಣ, ತಬಲ ನಾರಾಯಣಪ್ಪ, ಆನಂದ್ ಇದ್ದರು.