ರಸ್ತೆಗೆ ಚರಂಡಿ ನೀರು: ಸಂಚಾರಕ್ಕೆ ಕಿರಿಕಿರಿ
ಚಿಂತಾಮಣಿ: ರೇಲ್ವೆ ಅಂಡರ್ಪಾಸ್ ಚರಂಡಿಯು ಕಿರಿದಾಗಿರುವುದರಿಂದ ಮಳೆ ಬಿದ್ದಾಗ ನೀರು ಸರಾಗವಾಗಿ ಹರಿಯದೇ ಇರುವುದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಓಡಾಡಲು ತೀವ್ರ ಕಷ್ಟಕರವಾಗಿದೆಯೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಚೇಳೂರು ರಸ್ತೆಯ ರೇಲ್ವೆ ಅಂಡರ್ಪಾಸ್ ಬಳಿ ಇರುವ ಪಕ್ಕದ ಚರಂಡಿ ಕಾಮಗಾರಿ ಮೇಲ್ನೋಟಕ್ಕೆ ಕಳಪೆಯಿಂದ ಕೂಡಿದ ಪರಿಣಾಮ ಕಿರಿದಾಗಿರುವುದರಿಂದ ಮಳೆ ಬಿದ್ದಾಗ ನೀರು ಸರಾಗವಾಗಿ ಹರಿಯದೇ ಇರುವುದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿ ನಿತ್ಯ ಕೆಸರು ಅಭಿಷೇಕವಾಗುತ್ತಿದೆಯೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.