ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಲೇವಾದೇವಿ ಕುರಿತು ಮನಸ್ತಾಪ: ಒಬ್ಬನ ಬರ್ಬರ ಹತ್ಯೆ

Rashmi Kasaragodu
Updated On : 11 Sept 2013, 11:44 am

ಚಿಂತಾಮಣಿ: ಹಣಕಾಸಿನ ಲೇವಾದೇವಿ ವಿಷಯವಾಗಿ ಇಬ್ಬರು ಯುವಕರಲ್ಲಿ ಮನಸ್ತಾಪ ಉಂಟಾಗಿ ಯುವಕನೊಬ್ಬತನ್ನ ಸ್ನೇಹಿತನನ್ನೆ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆಗೈದ ದಾರುಣ ಘಟನೆ ಪಟ್ಟಣದಲ್ಲಿನ ವೆಂಕಟಗಿರಿಕೋಟೆಯಲ್ಲಿ(ಆಶ್ರಯ ಬಡಾವಣೆ) ಬುಧವಾರ ಮಧ್ಯಾಹ್ನ ನಡೆದಿದೆ.
ಘಟನೆ ವಿವರ:  ಪಟ್ಟಣದ ವೆಂಕಟಗಿರಿಕೋಟೆ ಹತ್ತಿರವಿರುವ(ಆಶ್ರಯ ಬಡಾವಣೆ)ಯಲ್ಲಿ ಮಧ್ಯಾಹ್ನ 3.30 ಗಂಟೆಯಲ್ಲಿ ಅಲ್ಲಾ ಬಕಾಶ್(19) ಎಂಬಾತನೇ ಕೊಲೆಯಲ್ಲಿ ಮೃತಪಟ್ಟಿರುವ ದುರ್ದೈವಿ. ಹಣಕ್ಕಾಗಿ ಪೀಡಿಸುತ್ತಿದ್ದ ಅಲ್ಲಾ ಬಕಾಶ್ನನ್ನು ತನ್ನ ಕೈಯಲ್ಲಿದ್ದ ಹರಿತವಾದ ಚಾಕುವಿನಿಂದ ಕೊಲೆಗೈದಿದ್ದೇನೆ ಎಂದು ಮೊಹಬೂಬ್ಪಾಷಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಅಲ್ಲಾ ಬಕಾಶ್ ಮತ್ತು ಮೊಹಬೂಬ್ಪಾಷಾ  ಇಬ್ಬರು ಸ್ನೇಹಿತರಾಗಿ ಹಣಕಾಸಿನ ಲೇವಾದೇವಿಯೇ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಲ್ಲಾ ಬಕಾಶ್ ಮತ್ತು ಕೊಲೆ ಆರೋಪಿ ಮೊಹಬೂಬ್ಪಾಷಾ ಎಂಬಿಬ್ಬರೂ ಸ್ನೇಹಿತರಾಗಿ ಪಡ್ಡೆ ಹುಡುಗರಾಗಿ ಗೋಳಿ ಗುಂಡು, ಜೂಜಾಟ ಮತ್ತು ಹಣಕಾಸು ಲೇವಾದೇವಿ ಇರುವುದಾಗಿ ಸ್ಥಳೀಯ ನಾಗರಿಕರು ಅಂತೆ ಕಂತೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
  ಬೆಳಿಗ್ಗೆ ಅಲ್ಲಾ ಬಕಾಶ್ ಕೇವಲ 200 ರು. ಗಾಗಿ ಪೀಡಿಸುತ್ತಿದ್ದ ಎನ್ನಲಾಗಿ ಅರಿತವಾದ ಚಾಕುವಿನಿಂದ ಹೃದಯ ಕೆಳಭಾಗದ ಹೊಟ್ಟೆಗೆ ತಿವಿದು ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಆರೋಪಿ ತಾನು ಮಾಡಿದ ಕೊಲೆ ಬಗ್ಗೆ ವಿವರಿಸಿರುವುದಾಗಿ ಪಟ್ಟಣದ ವೃತ್ತ ನಿರೀಕ್ಷಕ ನಂಜಪ್ಪ ಕೊಲೆ ಬಗ್ಗೆ ವಿವರಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ: ಮೃತಪಟ್ಟ ಅಲ್ಲಾ ಬಕಾಶ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯ ಶವಾಗಾರದ ಮುಂದೆ ಅಳುತ್ತಾ ಅನ್ಯಾಯವಾಗಿ ಮಗನನ್ನು ಕಳೆದುಕೊಂಡ ಹೆತ್ತವರು ಹಾಗೂ ಸಂಬಂಧಿಕರು ಆಕ್ರಂದನ  ಮುಗಿಲು ಮುಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುವುದಾಗಿ ತಿಳಿದುಬಂದಿದೆ.



ಆರೋಪಿ ಬಂಧಿಸಿದ ಪೊಲೀಸರು
ಕೊಲೆ ಮಾಡಿದ ಆರೋಪಿ ಮೊಹಬೂಬ್ಪಾಷಾ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ತಲೆ ಮರೆಸಿಕೊಳ್ಳಲು ಓಡಲು ಯತ್ನಿಸಿದಾಗ ನೆರೆಹೊರೆಯ ಸಹಾಯದಿಂದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕೊನೆಗೂ ಮಾರಕಾಸ್ತ್ರದೊಂದಿಗೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement