ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 13 Sept 2013, 12:02 pm

'ಅಜೋಲದಿಂದ ಜಾನುವಾರುಗಳಿಗೆ ಅಗತ್ಯ ಪೌಷ್ಟಿಕಾಂಶ'
ಶಿಡ್ಲಘಟ್ಟ: ದಿನನಿತ್ಯ ಮೇವಿನೊಂದಿಗೆ ಅಜೋಲ ನೀಡುವುದರಿಂದ ಹಾಲು ಕೊಡುವ ರಾಸುಗಳಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಲಿದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ರಮೇಶ್ ತಿಳಿಸಿದರು. ಚಿಂತಾಮಣಿಯ ಕುರುಬೂರಿನ ರೇಷ್ಮೆ ಕೃಷಿ ವಿಶ್ವ ವಿದ್ಯಾನಿಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗಾಮೀಣ ಕೃಷಿ ಅನುಭವ ಕಾರ್ಯಕ್ರಮದಡಿ ಅಬ್ಲೂಡು ಗ್ರಾಮದಲ್ಲಿ ಅಜೋಲ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಯ ಆವರಣದಲ್ಲಿಯೆ ಇರುವ ಜಾಗವನ್ನೇ ಬಳಸಿಕೊಂಡು ಅಜೋಲ ಬೆಳೆಯಬಹುದಾಗಿದ್ದು, ಅಜೋಲದಲ್ಲಿ ಹೇರಳವಾಗಿ ಪೌಷ್ಟಿಕಾಂಶಗಳು ಇರುತ್ತದೆ. ಅಜೋಲ ಸೇವಿಸುವುದರಿಂದ ಜಾನುವಾರುಗಳು ದಷ್ಟಪುಷ್ಟವಾಗಿ ಬೆಳೆಯುತ್ತದೆ ಎಂದರು. ವಿದ್ಯಾರ್ಥಿಗಳಾದ ಸೌಜನ್ಯ, ಸುದೀಪ್, ಸುಮ, ಉಷಾ, ವೀಣಾ, ವಿನೋದ್, ವಿಶ್ವಕುಮಾರ್, ವಿಶ್ವನಾಥ್, ವನಿತ, ಕೃಷಿ ಇಲಾಖೆಯ ರೈತ ಅನುವುಗಾರ ಆಂಜನೇಯರೆಡ್ಡಿ, ರೈತರಾದ ಅಂಡೆಪ್ಪ, ವೇಣುಗೋಪಾಲ್, ಚಿಕ್ಕಪಿಳ್ಳಪ್ಪ, ಶ್ರೀನಿವಾಸ್ ಇನ್ನಿತರರು ಹಾಜರಿದ್ದರು.
'ದೇಶದ ಅಭಿವೃದ್ಧಿಗೆ ಪ್ರಾಮಾಣಿಕತೆ ಅಗತ್ಯ'
ಶಿಡ್ಲಘಟ್ಟ: ಯುವ ಪೀಳಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು, ಉತ್ತಮವಾದ ಭವ್ಯ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನ್ಯಾಯಾಧೀಶ ಎಸ್. ಮಹೇಶ್ ಹೇಳಿದರು. ಪಟ್ಟಣದ ಸ್ವಾಮಿ ವಿವೇಕಾನಂದರ ಪ್ರತಿಷ್ಠಾನ ಹಾಗೂ ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಭಾರತದೆಡೆಗೆ ನನ್ನ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಲರಹಿತ ದೇಶವನ್ನು ನಿರ್ಮಾಣವಾಗಬೇಕು. ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು. ಆಹಾರ ಸಿಗಬೇಕು, ಮಹಿಳೆಯರು ಗೌರವಯುತವಾಗಿ ಸಂಚರಿಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು. ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್, ಪೂರ್ಣಾನಂದ ಸ್ವಾಮೀಜಿ, ಹನುಮಂತಪ್ಪ, ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ, ವಕೀಲ ರವೀಂದ್ರನಾಥ್, ಆರ್.ಪಿ. ಮಿಥುನ್ಕುಮಾರ್, ರಾಜು, ಎಂ. ಅಶ್ವಥ್, ಶಶಿಕಾಂತ್ ಮುಂತಾದವರು ಹಾಜರಿದ್ದರು.
ಜಾನುವಾರು ಸಾವು: ಪರಿಹಾರಕ್ಕೆ ಆಗ್ರಹ
ಶಿಡ್ಲಘಟ್ಟ: ತೀವ್ರವಾದ ಜ್ವರದಿಂದ ಜಾನುವಾರುಗಳು ಮೃತಪಡುತ್ತಿದ್ದು, ಪರಿಹಾರಧನ  ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ತೀವ್ರವಾದ ಜ್ವರದಿಂದ ರಾಸುಗಳು ಸಾಯುತ್ತಿವೆ. ಬಹುತೇಕ ಜನರು ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದು, ರಾಸುಗಳ ಸಾವಿನಿಂದಾಗಿ ರೈತರು ಕಂಗಾಲಾಗಿದ್ದೇವೆ ಎಂದು ರೈತರು ತಿಳಿಸಿದ್ದಾರೆ. ತಾಲೂಕಿನ ಸಾದಲಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ರಾಸುಗಳು ಇಂತಹ ಕಾಯಿಲೆಗಳಿಗೆ ತುತ್ತಾಗಿ ಸಾಯುತ್ತಿವೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement